ರಾಯಚೂರು: ಕೆಲ ದಿನಗಳಲ್ಲೇ ಜಗತ್ತಿಗೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ, ಹಸುಗೂಸನ್ನು ಹೆತ್ತಾಡಿಸುವ ತಾಯಿ ಹಂಬಲವೆರಡೂ ಒಂದು ಅಪಘಾತಕ್ಕೆ ಬಲಿಯಾಗಿವೆ.
ರಾಯಚೂರಿನ ಬಸವನಬಾವಿ ವೃತ್ತದಲ್ಲಿ ಯಮಸ್ವರೂಪಿಯಾದ ಲಾರಿ 9 ತಿಂಗಳ ಗರ್ಭಿಣಿ ಮೇಲೆ ಹರಿದ ಪರಿಣಾಮ ತಾಯಿ ಹಾಗೂ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದೆ.
ಚಂದ್ರಬಂಡಾ ಗ್ರಾಮದ ನಿವಾಸಿ ಸರೋಜ ಎಂಬುವರು ಮೃತ ದುರ್ದೈವಿ. ಇಕೆ ಚಿಕಿತ್ಸೆಗೆಂದು ಬಂದಿದ್ದ ವೇಳೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮಗು ಗರ್ಭದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.