ಬೆಂಗಳೂರು: ವೃತ್ತಿ ಶಿಕ್ಷಣದ ಕೋರ್ಸ್‍ಗಳಿಗೆ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಂದ ಹಣ ಪಡೆದು ಎಜುವಲ್ರ್ಡ್ ಸಂಸ್ಥೆ ವಂಚಿಸುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್
ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ ರಾಜ್ಯಾಧ್ಯಕ್ಷ ಅಂಬರೀಷ್ ಮಾತನಾಡಿ, ಸಂಜಯ್
ನಗರದಲ್ಲಿ ಕೇಂದ್ರ ಕಚೇರಿಯೊಂದನ್ನು ಹೊಂದಿರುವ ಎಜುವಲ್ರ್ಡ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಎಂಬಿಬಿಎಸ್, ಎಂಬಿಎ, ಲಾ, ಎಂಡಿ, ಎಂಡಿಎಸ್, ಐಎಂಎಸ್ ಸೇರಿದಂತೆ ವಿವಿಧ ವೃತ್ತಿ ಕೋರ್ಸ್‍ಗಳಿಗೆ ದಾಖಲು ಮಾಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ.ಗಳನ್ನು ಪಡೆದು ವಂಚಿಸುತ್ತಿದೆ ಎಂದು ದೂರಿದರು.
ಇತ್ತೀಚಿಗೆ ತಮಿಳುನಾಡು ಮೂಲದ ವಿದ್ಯಾರ್ಥಿನಿ ನಿವೇದಿತಾ ಎಂಬುವವರ ಬಳಿ ರು.50 ಲಕ್ಷ ರೂ.ಗಳಿಗೆ ರಾಜ್ಯದಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮುಂಗಡವಾಗಿ ರು.20 ಲಕ್ಷ ಹಣ ಪಡೆದಿದ್ದಾರೆ. ನಂತರ ರಾಜ್ಯದ ಕಾಲೇಜುಗಳಲ್ಲಿ ಸೀಟು ಲಭ್ಯವಿಲ್ಲ ಎಂದು ಹೇಳಿ ವಿದ್ಯಾರ್ಥಿನಿಗೆ ಮಹಾರಾಷ್ಟ್ರದ ಸತಾರ ಐಎಂಎಸ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿನಿಯನ್ನು ಅಲ್ಲಿಗೆ ಕಳುಹಿಸಿದ್ದಾರೆ. ಸತತವಾಗಿ ಒಂದು ವರ್ಷ ಸೀಟು ಕೊಡಿಸುವುದಾಗಿ ನಂಬಿಸಿ ರು.45 ಸಾವಿರ ಹಣವನ್ನು ಹಾಸ್ಟೆಲ್ ಹಣವಾಗಿ ಪಡೆದುಕೊಂಡಿದ್ದಾರೆ. ನಂತರ ನಿವೇದಿತಾ ಇದರ ಬಗ್ಗೆ ಪ್ರಶ್ನಿಸಿದರೆ ಒಂದು ಸೀಟು ಕೊಡಿಸಲು 45 ಲಕ್ಷ ಕೇಳಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರತಿಷ್ಠಿತ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳೂ ಈ ವಂಚಕ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಇತರೆ ವೃತ್ತಿ ಶಿಕ್ಷಣ ಕೋರ್ಸ್‍ಗಳ ಸೀಟುಗಳನ್ನು ಖಾಸಗಿ ಎಜೆಂಟಗಳ ಮೂಲಕ ಮಾರಾಟ ಮಾಡುತ್ತಿವೆ. ಇಂತಹ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕಬೇಕಾಗಿ ಹಾಗೂ ಎಜು ವಲ್ರ್ಡ್ ವಂಚಕ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.