ಜಿಲ್ಲಾ ಸುದ್ದಿ

ರಾಮಸ್ವಾಮಿ, ಶಂಕರ್, ಕೃಷ್ಣಯ್ಯಗೆ ನಾಡೋಜ

Rashmi Kasaragodu

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವವನ್ನು ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿದ ಮೂವರು ಸಾಧಕರಿಗೆ ಈ ಬಾರಿ ಪ್ರದಾನ ಮಾಡಲಾಗುತ್ತದೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ವೈದ್ಯ ಹಾಗೂ ಬರಹಗಾರ ಡಾ. ಪಿ.ಎಸ್. ಶಂಕರ್, ಹಿರಿಯ ವಿಮರ್ಶಕ ಪ್ರೊ  ಎಂ.ಎಚ್. ಕೃಷ್ಣಯ್ಯ ಮತ್ತು ಉತ್ಥಾನ ಮಾಸ ಪತ್ರಿಕೆಯ ಸಂಪಾದಕ, ಸಾಹಿತಿ ಎಸ್.ಆರ್. ರಾಮಸ್ವಾಮಿ ಅವರನ್ನು ಈ ಬಾರಿಯ ನಾಡೋಜ ಗೌರವಕ್ಕೆ ಆಯ್ಕೆ  ಮಾಡಲಾಗಿದೆ. ಮಾ . 6ರಂದು ಸಂಜೆ ನಡೆಯಲಿರುವ ವಿವಿಯ 23ನೇ ನುಡಿಹಬ್ಬದ ಘಟಿಕೋತ್ಸವದಲ್ಲಿ ನಾಡೋಜ ಪದವಿ ಪ್ರದಾನ ಮಾಡಲಾಗುವುದು
ಎಂದು ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಸೋಮವಾರ ತಿಳಿಸಿದರು. ಚಿತ್ರನಟ ಶ್ರೀಧರ್ ಹಾಗೂ ಮಾಧವ ಉಡುಪಗೆ ಡಿ.ಲಿಟ್, 56 ಸಂಶೋಧಕರಿಗೆ ಪಿಎಚ್.ಡಿ, 62 ಜನರಿಗೆ ಎಂ.ಪಿsಲ್., 907 ಜನರಿಗೆ ಸ್ನಾತಕೋತ್ತರ ಪದವಿ, 381 ಪದವಿ, 334 ಡಿಪ್ಲೋಮಾ ಪದವಿ ಸೇರಿ ಒಟ್ಟು 1742ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.

SCROLL FOR NEXT