ಬೆಂಗಳೂರು: ಹಳೇ ಬಾಣಸವಾಡಿಯಲ್ಲಿ ಖಾಸಗಿ ಕಂಪನಿ ಮೇಲ್ವಿಚಾರಕ ದೇವಿಪ್ರಸಾದ್(47) ಎಂಬುವರು ನೇಣಿಗೆ ಶರಣಾಗಿದ್ದಾರೆ.
ಪಾಲಕರು ಮೃತಪಟ್ಟ ನಂತರ ಪತ್ನಿ ಹಾಗೂ ಮಕ್ಕಳಿಂದ ಬೇರ್ಪಟ್ಟ ದೇವಿಪ್ರಸಾದ್ ಹಳೇ ಬಾಣಸವಾಡಿಯಲ್ಲಿರುವ ಸ್ವಂತ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಇವರ ಸಹೋದರ ಮತ್ತೊಂದು ಮನೆಯಲ್ಲಿ ವಾಸವಿದ್ದು, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದರು. ಮನೆ ಪಾಲು ಮಾಡಲು ಇಷ್ಟವಿಲ್ಲದ ದೇವಿಪ್ರಸಾದ್ ಸೋಮವಾರ
ತಡರಾತ್ರಿ ಒಂದು ಗಂಟೆ ಸುಮಾರಿಗೆ ನೇಣು ಹಾಕಿಕೊಂಡಿದ್ದಾರೆ.
ಕುಟುಂಬ ಸದಸ್ಯರು ಸೋಮವಾರ ಬೆಳಗ್ಗೆ ಫೋನ್ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಹೀಗಾಗಿ ಮನೆಗೆ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ