ಜಿಲ್ಲಾ ಸುದ್ದಿ

ಹೆಚ್ಚುತ್ತಿರುವ ನಮ್ಮೊಳಗಿನ ವ್ಯಂಗ್ಯ

ಮಗಸೊಸೆ ನಮ್ಮನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದಾರೆ ರೀ ಎಂದು ಪತ್ನಿ ಸಂಭ್ರಮಿಸಿದರೆ, ಅತ್ತ ವೃದ್ಧ ಪತಿ ಅಲ್ವೆ ಪೆದ್ದಿ, ಮೊಮ್ಮಕ್ಕಳ ರಜೆ ಮುಗೀತು...

ಬೆಂಗಳೂರು: `ಮಗಸೊಸೆ ನಮ್ಮನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದಾರೆ ರೀ ಎಂದು ಪತ್ನಿ ಸಂಭ್ರಮಿಸಿದರೆ, ಅತ್ತ ವೃದ್ಧ ಪತಿ ಅಲ್ವೆ ಪೆದ್ದಿ, ಮೊಮ್ಮಕ್ಕಳ ರಜೆ ಮುಗೀತು, ನಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಲು ಕರೆದು ಕೊಂಡು ಹೋಗುತ್ತಿದ್ದಾರೆ....' ಎನ್ನುವ ಚಿತ್ರ ಆಧುನಿಕ ಕಾಲದಲ್ಲಿ ವೃದ್ಧ ತಂದೆತಾಯಿಗಳ ಸ್ಥಿತಿ.

ಬಿಂದಿಯಿಂದ ತುಂಬಿ ಹರಿಯುತ್ತಿರುವ ನೀರಿನ ವ್ಯರ್ಥತೆ ಬಗ್ಗೆ ಎಚ್ಚರಿಕೆ, ಸ್ವಾಮೀಜಿಗಳನ್ನು ಭೇಟಿ ಮಾಡಲು ಸೇಬುಹಣ್ಣಿನೊಂದಿಗೆ ಆಶ್ರಮಕ್ಕೆ ಹೋದ ಶಿಷ್ಯರಿಗೆ ಈ ಆ್ಯಪಲ್ ಬೇಡ, ಇನ್ನು ಮುಂದೆ ಆ್ಯಪಲ್ ಮೊಬೈಲ್ ತನ್ನಿ ಎಂದು ತಾಕೀತು ಮಾಡುವ ಆಧುನಿಕ ಸ್ವಾಮೀಜಿಗಳು... ಹೀಗೆ ಬದುಕಿನ ಹಲವು ವಿಷಯಗಳನ್ನು ಹೊತ್ತ ಹಾಸ್ಯ ಮಿಶ್ರಿತ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡಿವೆ.

ವ್ಯಂಗ್ಯಚಿತ್ರಕಾರ ಸಂಕೇತ್ ಗುರುದತ್ ಅವರ ಕಾಮಿಕ್ ಸ್ಟ್ರಿಪ್ಸ್, ಕ್ಯಾರಿಕೇಚರ್ಸ್ ಹಾಗೂ ಸಾಮಾನ್ಯ ವ್ಯಂಗ್ಯಚಿತ್ರಗಳನ್ನೊಳಗೊಂಡ 71 ಚಿತ್ರಗಳು ಈ ಪ್ರದರ್ಶನದ ಗುಚ್ಛದಲ್ಲಿವೆ. ಇದು ಭಾರತೀಯ ವ್ಯಂಗ್ಯಚಿತ್ರ ಸಂಸ್ಥೆ ಮಾ.28ರವರೆಗೆ ಏರ್ಪಡಿಸಿರುವ ಸಂಕೇತ್ ಗುರುದತ್ ಅವರ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನದ ಉದ್ಘಾಟನೆ ಮತ್ತು ಕಾರ್ಟೂನ್ ಸ್ಕ್ರಿಪ್ಟ್ ಗಳ ಸಂಗ್ರಹದ ವಿಶೇಷ.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಗುಂಡೂರಾವ್ ಈಜುಕೊಳದ ಉದ್ಘಾಟನೆಯಲ್ಲಿ ತಾವೇ ಕೊಳಕ್ಕೆ ಧುಮುಕಿ ವಿಭಿನ್ನವಾಗಿ ಉದ್ಘಾಟಿಸಿದ್ದರು. ಮರುದಿನ ಶೌಚಾಲಯ ಉದ್ಘಾಟನೆಗೆ ಅವರಿಗೆ ಆಮಂತ್ರಿಸುವ ಪತ್ರಿಕೆ ವ್ಯಂಗ್ಯಚಿತ್ರವಾಗಿ ಮೂಡಿ ಬಂದಿತ್ತು. ಇದು ಎಲ್ಲವನ್ನು ತಾನೇ ಮಾಡಬೇಕೆನ್ನುವ ಅಧಿಕಾರಸ್ಥರ ಗೀಳನ್ನು ತೋರಿಸುತ್ತದೆ. ನಮ್ಮನ್ನು ನಾವು ವ್ಯಂಗ್ಯ ಮಾಡಿಕೊಳ್ಳುವ ಬೇರೆಯವರ ವ್ಯಂಗ್ಯವನ್ನು ಸಹಿಸಿಕೊಳ್ಲುವ ಕ್ರೀಡಾಮನೋಭಾವ ಇತ್ತೀಚೆಗೆ ಕುಸಿಯುತ್ತಿದೆ ಎಂದು ವಿಷಾದಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಮಾತನಾಡಿ, ವ್ಯಂಗ್ಯಚಿತ್ರಗಳನ್ನು ಸಾಕ್ಷ್ಯಚಿತ್ರ ಮತ್ತು ಡಿಜಟಲೀಕರಿಸಿದರೆ ಅವುಗಳನ್ನು ಕುರಿತು ಹೆಚ್ಚಿನ ಸಂಶೋಧನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT