ಹರ್ಷಗುಪ್ತ 
ಜಿಲ್ಲಾ ಸುದ್ದಿ

ಹರ್ಷಗೆ ಎತ್ತಂಗಡಿ ಶಿಕ್ಷೆ

ದಿಟ್ಟ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಹರ್ಷಗುಪ್ತ. ಚಾಮರಾಜನಗರದ ಜಿಲ್ಲಾಧಿಕಾರಿಯಾಗಿದ್ದ...

ಬೆಂಗಳೂರು: ದಿಟ್ಟ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಹರ್ಷಗುಪ್ತ. ಚಾಮರಾಜನಗರದ ಜಿಲ್ಲಾಧಿಕಾರಿಯಾಗಿದ್ದ ಅವರು ಜಿಲ್ಲಾದ್ಯಂತ ಸರ್ಕಾರಿ ಜಾಗ ಒತ್ತುವರಿಗಳನ್ನು ತೆರವುಗೊಳಿಸಿದರು. ಅಷ್ಟೇ ಅಲ್ಲ ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತೀವ್ರವಾಗಿದ್ದ ಭ್ರಷ್ಟಾಚಾರ ನಿಯಂತ್ರಿಸಿದರು. ಇದನ್ನು
ಸಹಿಸದ ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ತಂದು ಬೀದರ್ ಜಿಲ್ಲೆಗೆ ಎತ್ತಂಗಡಿ ಮಾಡಿಸಿದರು.
ಬೀದರ್‍ನಲ್ಲಿ ಜಿಲ್ಲಾಧಿಕಾರಿಯಾಗಿ ಗಮನಾರ್ಹ ಸಾಧನೆ ಮಾಡಿದರು.ಅಲ್ಲಿ ಸರ್ಕಾರದ ಅನೇಕ ಯೋಜನೆಗಳು ಜನರಿಗೆ ಲಭಿಸಲು ಅಡ್ಡಿಯಾಗಿದ್ದ ಭ್ರಷ್ಟ ಅಧಿಕಾರಿ ಗಳಿಗೆ ಸಿಂಹ ಸ್ವಪ್ನವಾದರು. ಆಗಲೂ ಸರ್ಕಾರ ಗುಪ್ತ ಅವರನ್ನು ನಗರಾಭಿವೃದ್ಧಿಯ ಯಾವುದೋ ಸಣ್ಣ ವಿಭಾಗಕ್ಕೆ ನಿಯೋಜಿ ಸಲಾಯಿತು. ಬೇಸರವೆಂದರೆ ಈ ಎರಡೂ ಜಿಲ್ಲೆಗಳಲ್ಲೂ
ವರ್ಗಾವಣೆಯಾದಾಗ ಜನರು ಭಾರೀ ಪ್ರತಿಭಟನೆ ನಡೆಸಿದ್ದರು. ಇದೆಲ್ಲವನ್ನು ಸಹಿಸಿಕೊಂಡು ಮಾನವಾ ಗಿದ್ದ ಹರ್ಷಗುಪ್ತ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾದರು. ಆಗ ಇದೇ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರು. ಇಂಥ ಕಠಿಣ ಯೋಜನೆಯನ್ನು ಸದ್ದಿಲ್ಲದೆ ಯಶಸ್ವಿಗೊಳಿ ಸಲು ಮುಂದಾದ ಗುಪ್ತ ಅನೇಕ ಟೀಕೆಗಳನ್ನು ಎದುರಿಸಿದರು. ಆದರೂ ಎದೆಗುಂದದೆ ಇಲಾಖೆಯಲ್ಲಿ ನ್ಯಾಯಬೆಲೆ ಅಂಗಡಿಗಳು
ನಡೆಸಿಕೊಂಡು ಬರುತ್ತಿದ್ದ ದಶಕಗಳ ಅಕ್ರಮಗಳನ್ನು ತಡೆದರು. ಅದಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರ ಕಡುಬಡವರಿಗೆಂದು ನೀಡುತ್ತಿದ್ದ ಸಬ್ಸಿಡಿ
ದರದ ಸೀಮೆಎಣ್ಣೆಯನ್ನು ಪಡಿತರ ಹೆಸರಿ ನಲ್ಲಿ ಪಡೆದು ಮೀನುಗಾರಿಕೆ ದೋಣಿಗಳಿಗೆ ಬಳಸುತ್ತಿರುವುದನ್ನು ಪತ್ತೆ ಮಾಡಿದರು. ಹಾಗೆಯೇ
ಸಬ್ಸಿಡಿ ದರದ ಸೀಮೆಎಣ್ಣೆ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ನಿಲ್ಲಿಸಿದರು.  ಇದರೊಂದಿಗೆ ಕೈ ಜೋಡಿಸಿಕೊಂಡಿದ್ದ ಆಯಿಲ್ ಮಾಫಿಯಾ  ಒಂದೇ ಏಟಿಗೆ ಸದ್ದಿಲ್ಲದೆ ಹರ್ಷಗುಪ್ತ ಅವರನ್ನು ಎತ್ತಂಗಡಿ ಮಾಡಿಸಿತು. ಅಷ್ಟೇ ಅಲ್ಲ ಮೂರು ತಿಂಗಳಿಗೂ ಹೆಚ್ಚು ಕಾಲ ಗುಪ್ತ ಅವರಿಗೆ ಯಾವುದೇ ಸ್ಥಾನ ಸಿಗದೆ ಅತಂತ್ರ ವಾಗಿರುವಂತೆಯೂ ಮಾಡಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದಂತೆ ಸರ್ಕಾರ, ಗುಪ್ತ ಅವರನ್ನು ಮೀನುಗಾರಿಕೆ ಇಲಾಖೆಗೆ ನಿಯೋಜಿಸಿತು.
ಇಲ್ಲಿ ಮೀನುಗಾರಿಕೆ ಉಪಕರಣಗಳು ಖರೀದಿಯಲ್ಲಿ ನಡೆದಿದ್ದ ಟೆಂಡರ್ ಅಕ್ರಮಗಳನ್ನು ಪತ್ತೆ  ಮಾಡಿದ್ದರು. ಇದನ್ನು ಸರಿಪಡಿಸಬೇಕೆನ್ನುವಷ್ಟರಲ್ಲಿ ಹರ್ಷಗುಪ್ತ
ಅವರಿಗೆ ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿಯ ಹೆಚ್ಚುವರಿ ಹುದ್ದೆ ನೀಡಿ ಒತ್ತಡದಲ್ಲಿ ಕೆಲಸ ನಿರ್ವಹಿಸುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT