ತುಮಕೂರು: ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ನಂತರ ಆಹಾರ ತ್ಯಜಿಸಿರುವ ತಾಯಿ ಗೌರಮ್ಮ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಶುಕ್ರವಾರ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ದಿನಗಳಿಂದ ರವಿ ತಾಯಿ ಗೌರಮ್ಮ ಆಹಾರ ಸೇವಿಸಿರಲಿಲ್ಲ. ಹಿರಿಯ ಮಗ ರಮೇಶ್ ತಾಯಿಯ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅದು ಸಫಲವಾಗಿಲ್ಲ.
ಇದರಿಂದ ಅಸ್ವಸ್ಥಗೊಂಡ ಅವರನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರುವ ಹುಲಿಯೂರು ದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸೋದರತ್ತೆ ಸಾವು
ಡಿ.ಕೆ ರವಿ ಸಾವಿನಿಂದ ಆಘಾತಗೊಂಡಿದ್ದ ಸೋದರತ್ತೆ ಪದ್ಮಮ್ಮ ಶುಕ್ರವಾರ ಸಾವನ್ನಪ್ಪಿದ್ದಾರೆ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಮ್ಮ(56) ರವಿ ಸಾವಿನ ನಂತರ ತೀವ್ರವಾಗಿ ಆಘಾತಗೊಂಡು, ಅಸ್ವಸ್ಥರಾಗಿದ್ದರು. ಪದ್ಮಮ್ಮ ಅವರನ್ನು ಬೆಂಗಳೂರಿಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.