ವಾರ್ತಾ ಸಚಿವ ರೋಷನ್ ಬೇಗ್ 
ಜಿಲ್ಲಾ ಸುದ್ದಿ

ವಾಟ್ ಎ ಸಿಬಿ ನ್ಯಾಟ್!

ಕ್ಷಯರೋಗ ಪತ್ತೆಗಾಗಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ತುರ್ತು ಪರೀಕ್ಷಾ ಘಟಕ(ಸಿಬಿ ನ್ಯಾಟ್) ಸ್ಥಾಪಿಸಲಾಗಿದೆ. ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಮಂಗಳವಾರ ಈ ನೂತನ ಘಟಕಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ಚಾಲನೆ ನೀಡಿದರು...

ಬೆಂಗಳೂರು: ಕ್ಷಯರೋಗ ಪತ್ತೆಗಾಗಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ತುರ್ತು ಪರೀಕ್ಷಾ ಘಟಕ(ಸಿಬಿ ನ್ಯಾಟ್) ಸ್ಥಾಪಿಸಲಾಗಿದೆ. ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಮಂಗಳವಾರ ಈ ನೂತನ ಘಟಕಕ್ಕೆ ವಾರ್ತಾ ಸಚಿವ ರೋಷನ್ ಬೇಗ್ ಚಾಲನೆ ನೀಡಿದರು.

ಬೆಳಗಾವಿ, ಮೈಸೂರು, ದಾವಣಗೆರೆ, ಬಾಗಲಕೋಟೆ ಜಮಖಂಡಿ, ಸೇರಿದಂತೆ ರಾಜ್ಯದಲ್ಲಿ ಒಟ್ಟು 7 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಷಯ ರೋಗ ಮತ್ತು ಎಚ್‍ಐವಿ ತುರ್ತು ಪರೀಕ್ಷಾ ಘಟಕಗಳನ್ನು ತೆರೆಯಲಾಗಿದೆ. ಈ ಸಾಲಿಗೆ ಈಗ ಹೊಸದಾಗಿ  ಬೌರಿಂಗ್ ಆಸ್ಪತ್ರೆಯೂ ಸೇರಿದೆ. ಅತ್ಯಂತ ಸುಧಾರಿತ ತಂತ್ರಜ್ಞಾನದ ಈ ಘಟಕದಿಂದ ಎಚ್‍ಐವಿ ಮತ್ತು ಕ್ಷಯ ಸಂಬಂಧಿತ ಕಾಯಿಲೆಗಳಿಗೆ ಒಳಗಾದವರನ್ನು ತುರ್ತು ಪರೀಕ್ಷೆಗೆ ಒಳಪಡಿಸಿ, ರೋಗ ಪತ್ತೆ ಹಚ್ಚಬಹುದಾಗಿದೆ.

ಸಾಮಾನ್ಯವಾಗಿ ಕ್ಷಯ ರೋಗದ ಲಕ್ಷಣ ಕಂಡು ಬಂದವರನ್ನು ತಪಾಸಣೆಗೆ ಒಳಪಡಿಸಿ, ರೋಗ ಪತ್ತೆ ಹಚ್ಚಲು ಈಗ ಕನಿಷ್ಠ ಮೂರು ತಿಂಗಳು ಬೇಕಾಗಿತ್ತು. ಆದರೆ, ಈ ಸಿಬಿ ನ್ಯಾಟ್ ತುರ್ತು ಪರೀಕ್ಷಾ ಘಟಕ ಕೇವಲ 90 ನಿಮಿಷಗಳಲ್ಲಿ ರೋಗ ಪತ್ತೆ ಹಚ್ಚಿ, ಅದರ ಲಕ್ಷಣದ ವರದಿ ನೀಡಲಿದೆ. ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ರಾಜ್ಯ ಸರ್ಕಾರ ಈ ಘಟಕ ಸ್ಥಾಪಿಸಿದ್ದು, ಸಾರ್ವಜನಿಕರಿಗೆ ಉಚಿತ ಸೇವೆ ನೀಡಲಿದೆ. ಇದೇ ವೇಳೆ, ಕ್ಷಯ ರೋಗ ನಿಯಂತ್ರಣಕ್ಕೆ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮಕ್ಕೆ ರೋಷನ್ ಬೇಗ್ ಚಾಲನೆ ನೀಡಿದರು. ಬೆಂಗಳೂರು ವೈದ್ಯಕೀಯ ಕಾಲೇಜು ಡೀನ್ ದೇವದಾಸ್, ಬೋರಿಂಗ್ ಆಸ್ಪತ್ರೆಯ ಮುಖ್ಯಸ್ಥರಾದ ವೈ.ಎಸ್. ಖಾದ್ರಿ ಹಾಜರಿದ್ದರು.

ಘಟನೆ ಉದ್ಘಾಟನೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಆರ್. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ರಾಜ್ಯದಲ್ಲಿ 13 ಜೀನ್ ಎಕ್ಸ್‍ಪರ್ಟ್ ಯಂತ್ರ ಅಳವಡಿಸಲಾಗಿದೆ. ಕ್ಷಯ ರೋಗ ತ್ವರಿತವಾಗಿ ಪತ್ತೆ ಹಚ್ಚಲು ಈ ಘಟಕಗಳು ಹೆಚ್ಚು ಅನುಕೂಲಕರ. ಇದರಲ್ಲಿ 7 ಯಂತ್ರ ಶಂಕಿತ ಎಚ್‍ಐವಿ ರೋಗಿಗಳ ತಪಾಸಣೆಗೆ ಮೀಸಲಿಡಲಾಗಿದೆ' ಎಂದರು.

ರಾಜ್ಯದಲ್ಲಿ  60722 ಪ್ರಕರಣಗಳು
ರಾಜ್ಯಾದ್ಯಂತ ಒಟ್ಟು 60,772 ಕ್ಷಯ ರೋಗ ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2986 ರೋಗಿಗಳು ಎಚ್‍ಐವಿ ಸೇರಿದಂತೆ ನಾನಾ ಕಾಯಿಲೆಗಳಿಗೂ ಸಿಲುಕಿ ಮೃತಪಟ್ಟಿದ್ದಾರೆ. 41289 ರೋಗಿಗಳಿಗೆ ಚಿಕಿತ್ಸೆ ಪೂರ್ಣಗೊಳಿಸಲಾಗಿದೆ. ಚಿಕಿತ್ಸೆಯಲ್ಲಿ ಶೇ.82ರಷ್ಟು ಪ್ರಗತಿ ಸಾಧಿಸಲಾಗಿದೆ. 2014ರಲ್ಲಿ ನಿರೀಕ್ಷೆಗೆ ಮೀರಿ ಕ್ಷಯ ನಿಯಂತ್ರಣ ಕಾರ್ಯಕ್ರಮದಲ್ಲಿ ಯಶಸ್ಸು ಕಂಡಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT