ಬೆಂಗಳೂರು: ರಾಮಮೂರ್ತಿನಗರ ವಿಜಿನಾಪುರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷಯಾ(17) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಂಕರನಾರಾಯಣ್ ಮತ್ತು ಶಾಂತಿ ದಂಪತಿ ಪುತ್ರಿ ಅಕ್ಷಯಾ ಗುರುವಾರ ಸಂಜೆ ಬ್ಯಾಡ್ಮಿಂಟನ್ ಆಡಲು ಹೋಗಿದ್ದಳು. ನಂತರ ಮನೆಗೆ ಬಂದು ಕೊಠಡಿಗೆ ತೆರಳಿದ್ದಳು. ರಾತ್ರಿ 8ರ ಸುಮಾರಿಗೆ ಸ್ನೇಹಿತರು ಕರೆ ಮಾಡಿದಾಗ ಸ್ವೀಕರಿಸಿಲ್ಲ. ಅಲ್ಲದೆ, ಆಕೆಯ ತಾಯಿ ಬಾಗಿಲು ಬಡಿದರೂ ತೆಗೆದಿಲ್ಲ. ಹೀಗಾಗಿ, ಬಲ ಪ್ರಯೋಗಿಸಿ ಬಾಗಿಲು ತೆಗೆದಾಗ ನೇಣು ಬಿಗಿದಿ ರುವುದು ಕಾಣಿಸಿದೆ. ಸಾವಿಗೂ ಮುನ್ನಾ ಅಕ್ಷಯಾ ಮರಣ ಪತ್ರ ಬರೆದಿಟ್ಟಿದ್ದಾಳೆ. ರಾಮಮೂರ್ತಿ ನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಬಟ್ಟೆ ವ್ಯಾಪಾರಿ ಆತ್ಮಹತ್ಯೆ: ಮತ್ತೊಂದು
ಪ್ರಕರಣದಲ್ಲಿ ಜ್ಞಾನಭಾರತಿ ಆವರಣದಲ್ಲಿ ಬಟ್ಟೆ ವ್ಯಾಪಾರಿ ಜಯಗಾಂಧಿ (55) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ತಮಿಳುನಾಡು ಮೂಲದ ಜಯಗಾಂಧಿ ಕುಟುಂಬ ಸದಸ್ಯರ ಜತೆ ಭುವನೇಶ್ವರಿನಗರದಲ್ಲಿ ನೆಲೆಸಿದ್ದರು. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.