ಜಿಲ್ಲಾ ಸುದ್ದಿ

ಮಹಿಳಾ ದೌರ್ಜನ್ಯ: ತ್ವರಿತ ನ್ಯಾಯಾಲಯ

Mainashree

ಬೆಂಗಳೂರು: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಯಲು ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಲು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು ಎಂದು ಮಾಜಿ ಸಚಿವೆ ರಾಣಿ ಸತೀಶ್ ಆಗ್ರಹಿಸಿದರು.

ವಿಮೆನ್ಸ್ ವಾಯ್ಸ್ ವತಿಯಿಂದ ಇತ್ತೀಚೆಗೆ ನಗರದ ಸೆನೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಸರಿಯಾದ ಕಾನೂನನ್ನು ಜಾರಿಗೆ ತರಬೇಕು ಎಂದರು.

ಅಕಯ್ ಪದ್ಮಶಾಲಿ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರನ್ನು ಸಮಾಜವು ಕಡೆಗಣಿಸದೆ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು. ಡಾ.ರೂತ್ ಮನೋರಮಾ ಅರು 8 ಅಂಶವುಳ್ಳ ಬೇಡಿಕೆಗಳ ಮನವಿ ಪತ್ರವನ್ನು ಬಿಡುಗಡೆ ಮಾಡಿದರು.

ಮಾಜಿ ಸಚಿವೆ ಲೀಲಾದೇವಿ, ಆರ್ ಪ್ರಸಾದ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ, ಮಹಿಳಾ ಮುಖಂಡರಾದ ಬೃಂದಾ ಅಡಿಗಾ ಸೇರಿದಂತೆ ಮಹಿಳಾ ಮುಖಂಡರು ಭಾಗವಹಿಸಿದ್ದರು.

SCROLL FOR NEXT