ಜಿಲ್ಲಾ ಸುದ್ದಿ

ರೌಡಿಶೀಟರ್ ಅತಿಕ್ ಪಾಷಾ ವಿರುದ್ಧ ಗೂಂಡಾ ಕಾಯ್ದೆ

ಬೆಂಗಳೂರು: ಕೊಲೆ, ದರೋಡೆ, ದೊಂಬಿ, ಅಪಹರಣ, ಕಳವು ಸೇರಿದಂತೆ 16 ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಟನ್ ಪೇಟೆ ರೌಡಿ ಶೀಟರ್ ಅತಿಕ್ ಪಾಷಾ(37) ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ.

ಕಾಟನ್‍ಪೇಟೆ ನಿವಾಸಿಯಾಗಿರುವ ಅತಿಕ್, 2013ರಲ್ಲಿ ಕಾಟನ್‍ಪೇಟೆಯಲ್ಲಿ ರೌಡಿ ಸೂರಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ನಂತರ ಜೈಲಿನಲ್ಲಿರುವಾಗಲೇ ಸಹಚರರಿಗೆ ಕುಮ್ಮಕ್ಕು ನೀಡಿ 2014ರಲ್ಲಿ ಮತ್ತೊಬ್ಬ ರೌಡಿ ಜೀವ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.

 1999ರಿಂದ ರೌಡಿಗಳಾದ ದಿವಾನ್ ಅಲಿ, ತನ್ವೀರ್, ಈತನ ಸಹೋದರ ಸಮೀರ್, ಇಮ್ರಾನ್, ರಿಯಾಜ್, ಅಲ್ತಾಫ್, ನಾಸಿಕ್, ಇಮ್ತಿಯಾಜ್ ಜತೆ ಸೇರಿ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದ. 2001ರಲ್ಲಿ ಕಾಟನ್‍ಪೇಟೆ, ಬನಶಂಕರಿ ಪೊಲೀಸ್ ಠಾಣೆ ಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು. ಹಲವು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಅಪರಾಧ ಕೃತ್ಯ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆ ಹೇರಲಾಗಿದೆ.

SCROLL FOR NEXT