ಬೆಂಗಳೂರು: ಟ್ವಿಟರ್, ಫೇಸ್‍ಬುಕ್‍ನಂಥ ಜನಪ್ರಿಯ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ನಗರ ಪೊಲೀಸರು ಈಗ ನಗರದಲ್ಲಿ ಗಸ್ತು ವ್ಯವಸ್ಥೆ ಹಾಗೂ ಮಾಹಿತಿದಾರರಿಂದ ಮಾಹಿತಿ ವಿನಿಮಯ ಮಾಡಿಕೊಳ್ಳಲು ವಾಟ್ಸ್ ಆ್ಯಪ್ ಬಳಸಿಕೊಳ್ಳಲು ಮುಂದಾಗಿದ್ದಾರೆ. ಆ ಮೂಲಕ ನಗರ ಪೊಲೀಸರು ಸಾರ್ವಜನಿಕ ಸ್ನೇಹಿಯಯಾಗಲಿದ್ದು, ಅಪರಾಧ ತಡೆ,ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳ ಮಾಹಿತಿ ಕ್ಷಣಾರ್ಧದಲ್ಲಿ ಗಸ್ತಿನಲ್ಲಿರುವ ಪೊಲೀಸರಿಗೆ ಹಾಗೂ ಇನ್ಸ್‍ಪೆಕ್ಟರ್‍ಗೆ ತಲುಪುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸದ್ಯ ಇರುವ ಪೊ ಲೀಸ್ ಗಸ್ತು ವ್ಯವಸ್ಥೆಯಲ್ಲಿ ಒಂದು ಠಾಣೆ ವ್ಯಾಪ್ತಿಯಲ್ಲಿ ಆಯಾ ಪ್ರದೇಶಗಳಲ್ಲಿ ಪೋಲೀಸ್ ಮಾಹಿತಿದಾರರು ಇರುತ್ತಾರೆ. ಅನುಮಾನಾಸ್ಪದ
ವ್ಯಕ್ತಿಗಳು, ಚಲನವಲನಗಳ ಬಗ್ಗೆ ಫೋನ್ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಇದರಿಂದ ನಿರ್ದಿಷ್ಟ ಪೊಲಿಸ್ ಅಧಿಕಾರಿ ಅಥವಾ ಸಿಬ್ಬಂದಿಗೆ
ಸಂದೇಶ ತಲುಪುತ್ತದೆ. ಅವರಿಗೆ ಸಂದೇಶ ಸ್ವೀಕರಿಸಲು ಸಾಧ್ಯವಾಗದಿದ್ದರೆ, ತಡವಾದರೆ ಮಹತ್ವದ ಮಾಹಿತಿ, ಸುಳಿವು ಕೈತಪ್ಪಿ ಹೋಗಿ ಬಿಡುವ ಸಾಧ್ಯತೆಯೂ ಇರುತ್ತದೆ. ಆದರೆ, ವಾಟ್ಸ್‍ಆ್ಯಪ್ ಗ್ರೂಪ್‍ನಿಂದ ಒಬ್ಬರಲ್ಲದಿದ್ದರೂ ಮತ್ತೊಬ್ಬರಿಗೆ ಸಂದೇಶ ತಲುಪುವಂತಾಗುತ್ತದೆ.
ಆ್ಯಪ್ ಬಳಕೆ ಹೇಗೆ?:
ಇವತ್ತಿನ ಕಾಲದಲ್ಲಿ ಬಹುತೇಕ ಪೋಲೀಸ್ಅಧಿ ಕಾರಿಗಳು ಸ್ಮಾರ್ಟ್ ಫೋನ್ ಬಳಸುತ್ತಾರೆ
ವೈರ್‍ಲೆಸ್ ಸಿಸಿ ಕ್ಯಾಮೆರಾ ಮೂಲಕ ನಿಗಾ
ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಶಾಸಕರ ನಿಧಿ ಬಳಸಿಕೊಳ್ಳಲು ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಹೀಗಾಗಿ, ಅಶೋಕ ನಗರ, ಕಬ್ಬನ್‍ಪಾರ್ಕ್ ಹಾಗೂ
ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ವೈರ್‍ಲೆಸ್ ಸಿಸಿ ಕ್ಯಾಮೆರಾ ಅಳವಡಿಸುವ ಯೋ ಚನೆ ಇದೆ. ಸಿಸಿ ಕ್ಯಾಮೆರಾಗಳನ್ನು ಆಯಾಕಟ್ಟಿನ ಸ್ಥಳದಲ್ಲಿ
ಇರಿಸಲಾಗುತ್ತದೆ. ಸಿಸಿ ಕ್ಯಾಮೆರಾ ವಿಡಿಯೋ ವನ್ನು ವೀಕ್ಷಿಸಲು ಸಂಬಂಧಿಸಿದ ಠಾಣೆಯಲ್ಲಿಯೇ ಮಾನಿಟರ್ ಮಾಡಲಾಗುತ್ತದೆ. ಆ ಮೂಲಕ ಪೋಲೀಸರು ಆಯಾ
ಪ್ರದೇಶಗಳಲ್ಲಿ ನಡೆಯುತ್ತಿರುವ ಚಲನವಲನಗಳ ಮೇಲೆ ನಿಗಾ ಇರಿಸಲು ಸಾಧ್ಯ. ಇಂಥ ವ್ಯವಸ್ಥೆಯನ್ನು ಈಗಾಗಲೇ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.
ಗಸ್ತು ವ್ಯವಸ್ಥೆಯಲ್ಲಿ ವಾಟ್ಸ್ ಆ್ಯಪ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈಗ ಬಹುತೇಕರು ಸ್ಮಾರ್ಟ್ ಫೋ ನ್ ಬಳಸುತ್ತಾರೆ. ಹೀಗಾಗಿ, ಇದನ್ನು ಸದುಪಯೋ ಗಪಡಿಸಿ
ಕೊಂಡು ಸುರಕ್ಷಿತ ಸಮಾಜ ನಿರ್ಮಿಸಲು ಮುಂದಾಗಿದ್ದೇವೆ. ಇನ್ನು 15 ದಿನಗಳಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಕೆಲವು ಠಾಣೆ ವ್ಯಾಪ್ತಿಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ಅದರ ಯಶಸ್ಸಿನ ಮೇಲೆ ಬೇರೆ ಠಾಣೆಗಳಿಗೂ ವಿಸ್ತರಿಸುವ ಯೋ ಜನೆ ಇದೆ. ಅಲೋಕ್ ಕುಮಾರ್, ಹೆಚ್ಚುವರಿ ಪೋಲೀಸ್ ಆಯುಕ್ತ, ಪಶ್ಚಿಮ ವಿಭಾಗ
ಹೇಗಿರುತ್ತದೆ ಗ್ರೂಪ್?
ಠಾಣೆಯ ಇನ್ಸ್‍ಪೆಕ್ಟರ್, ಗಸ್ತಿನ ಸಿಬ್ಬಂದಿ ಹಾಗೂ 50ಕ್ಕೂ ಹೆಚ್ಚು ಪ್ರಜ್ಞಾವಂತ ನಾಗರಿಕರನ್ನು ಪ್ರತಿ ಗ್ರೂಪ್‍ನಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಪ್ರತಿ
ಠಾಣೆಯಲ್ಲಿ ಸುಮಾರು 40ರಿಂದ 60 ಸಿಬ್ಬಂದಿ ಗಸ್ತಿನಲ್ಲಿರುತ್ತಾರೆ. ನಿರ್ದಿಷ್ಟ ಪ್ರದೇಶದಲ್ಲಿರುವ ನಾಗರಿಕರು ಹಾಗೂಆ ಪ್ರದೇಶಗಳಲ್ಲಿ ಗಸ್ತು ತಿರುಗುವ ಪೋಲೀಸರನ್ನೊಳಗೊಂಡ ಗ್ರೂಪ್ ಕ್ರಿಯೇ ಟ್ ಮಾಡಲಾಗುತ್ತದೆ.