ಬೆಂಗಳೂರು: ಕೈ ಕಚ್ಚಿದ ಕೋಪಕ್ಕೆ ಸಾಕು ನಾಯಿಯನ್ನು ಕೊಂದ ಆರೋಪದಡಿ ಈಶಾನ್ಯ ಭಾರತದ ಇಬ್ಬರು ಯುವಕರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರ ಸಮೀಪದ ಭಟ್ಟರಹಳ್ಳಿಯ ಸುಭಾಷ್ ನಗರದಲ್ಲಿ ವಾಸವಾಗಿದ್ದ ಮಣಿಪುರ ಮೂಲದ ವಿದ್ಯಾರ್ಥಿಗಳು 6 ತಿಂಗಳಿಂದ ನಾಯಿ ಸಾಕಿಕೊಂಡಿದ್ದರು. ಆದರೆ, ಇತ್ತೀಚೆಗೆ ಅದು ತಮ್ಮನ್ನು ಕಚ್ಚಿದೆ ಎಂದು ಕೊಂದು ಶವವನ್ನು ಸಮೀಪದ ಕೆರೆದಂಡೆಯೊಂದರಲ್ಲಿ ಬಿಸಾಡಿದ್ದರು. ಇದನ್ನು ಗಮನಿಸಿದನೆರೆಮನೆಯ ಯುವಕನೊಬ್ಬ ಪ್ರಾಣಿ ದಯಾ ಸಂಘ ಹಾಗೂಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಾಯಿ ಕೊಂದ ಆರೋಪದ ಮೇಲೆ ಯುವಕರ ವಿರುದ್ಧ ಐಪಿಸಿ ಕಲಂ 428 ಅನ್ವಯ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕೆ.ಆರ್.ಪುರ ಪೊಲೀಸರು ತಿಳಿಸಿದ್ದಾರೆ.