ಎಸ್ ಎಸ್ ಎಲ್ ಸಿ ಬೋರ್ಡ್ 
ಜಿಲ್ಲಾ ಸುದ್ದಿ

ಜಾತಿವಾರು ಫಲಿತಾಂಶ: ಸ್ಪಷ್ಟನೆ ನೀಡಿದ ಎಸ್ ಎಸ್ ಎಲ್ ಸಿ ಬೋರ್ಡ್ ಅಧಿಕಾರಿಗಳು

ಜಾತಿ ಆಧಾರಿತ ಪ್ರವರ್ಗದ ವಿಂಗಡಣೆ ಮಾಡಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯನ್ನು ಮುಂದುವರಿಸಿರುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು....

ಬೆಂಗಳೂರು: ಜಾತಿ ಆಧಾರಿತ ಪ್ರವರ್ಗದ ವಿಂಗಡಣೆ ಮಾಡಿ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯನ್ನುಮುಂದುವರಿಸಿರುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದರೂ ತಜ್ಞರು ಅದನ್ನು ವಿರೋಧಿಸುತ್ತಿದ್ದಾರೆ. ಪ.ಜಾ, ಪ.ಪಂಗಡ ಪ್ರವರ್ಗ, ಇತರೆ ಎಂಬ 8 ಪ್ರತ್ಯೇಕ ವಿಭಾಗದಡಿ ಫಲಿತಾಂಶ ವಿವರ ನೀಡುವ ರೂಡಿಯನ್ನು ಪ್ರೌಢ ಶಿಕ್ಷಣ ಮಂಡಳಿ, ಪಪೂ ಶಿಕ್ಷಣ ಇಲಾಖೆ ಮಾಡಿಕೊಂಡು ಬಂದಿವೆ. ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಮುಂದಿನ ವ್ಯಾಸಂಗಕ್ಕೆ ನೀಡುವ ಉದ್ದೇಶದಿಂದ ಇಂಥ  ಮಾಹಿತಿ ಅನುಕೂಲವಾಗುತ್ತದೆ ಎನ್ನುವುದು ನಿಜ. ಆದರೆ ಭಿನ್ನ ಉದ್ದೇಶಕ್ಕಾಗಿ ಬಹಿರಂಗವಾಗಿ ಪ್ರಕಟಿಸುವುದು ಸರಿಯಲ್ಲ ಎಂಬ ಮಾತು ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಹಿಂದುಳಿದವರಿಗೆ ಪ್ರೋತ್ಸಾಹ ಧನ ನೀಡುತ್ತದೆ. ಹಾಗೆಯೇ ಹಿಂದುಳಿದ ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆಗೈಯ್ಯುತ್ತಿದ್ದಾರೆ. ಶಿಕ್ಷಣದಲ್ಲಿ ಅವರು ಹಿಂದೆ ಬಿದ್ದಿಲ್ಲ ಎನ್ನುವುದನ್ನು ಸಮಾಜಕ್ಕೆ ತಿಳಿಸಬೇಕು ಎನ್ನುವುದು ಇಲಾಖೆ ಉದ್ದೇಶ. ಮಾಹಿತಿ ಹಾಗೂ ಅವಲೋಕನಕ್ಕೆ ಇದು ಸೀಮಿತವಷ್ಟೆ ಎಂದು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ಯಶೋದಾ ಭೋಪಣ್ಣ ತಿಳಿಸಿದ್ದಾರೆ.

ಜಾತಿ
ಹಾಜರುಉತ್ತೀರ್ಣ
     ಶೇ.
ಪರಿಶಿಷ್ಟ ಜಾತಿ
142427
113383
79.61
ಪರಿಶಿಷ್ಟ ಪಂಗಡ
52958
43467
82.08
ಪ್ರವರ್ಗ -1
45087
38204
84.73
ಪ್ರವರ್ಗ- 2ಎ
128750
111880
86.90
ಪ್ರವರ್ಗ- 2ಬಿ86290
69743
80.82
ಪ್ರವರ್ಗ- 3ಎ
71555
65165
91.06
ಪ್ರವರ್ಗ- 3ಬಿ89148
79444
89.11
ಇತರೆ
172227
147704
85.76




Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT