ಜಿಲ್ಲಾ ಸುದ್ದಿ

ಪರಿಸರ ಮಾಲಿನ್ಯ: 84 ವಾಹನಗಳು ಸಾರಿಗೆ ಇಲಾಖೆ ವಶಕ್ಕೆ

ಬೆಂಗಳೂರು: ಅತಿಯಾದ ವಾಯುಮಾಲಿನ್ಯ ಹಾಗೂ ಕರ್ಕಶ ಹಾರನ್ ಹೊಂದಿದ್ದ 84 ಖಾಸಗಿ ವಾಹನಗಳನ್ನು ಸಾರಿಗೆ ಇಲಾಖೆ ವಶಕ್ಕೆ ಪಡೆದಿದೆ.

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ಅವರ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತ, ರೇಸ್ ಕೋರ್ಸ್ ರಸ್ತೆ ಸೇರಿ ದಂತೆ ನಗರವ್ಯಾಪಿ ಶನಿವಾರ ವಾಹನಗಳ
ತಪಾಸಣೆ ನಡೆಸಲಾಯಿತು. ಈ ವೇಳೆ ಅತಿ ಹೆಚ್ಚು ಹೊಗೆ ಉಗುಳುತ್ತಿದ್ದ ಹಾಗೂ ಕರ್ಕಶ ಹಾರ್ನ್ ಹೊಂದಿದ್ದ ಖಾಸಗಿ ಬಸ್ ಗಳು, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ವಾಹನಗಳು ಸೇರಿದಂತೆ 84 ವಾಹನಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ.

ಇನ್ನು ಕೆಲವು ವಾಹನಗಳಿಗೆ ದಂಡ ವಿಧಿಸಲಾಗಿದೆ. ನಿಗದಿಗೂ ಹೆಚ್ಚು ಭಾರ ಸಾಗಿಸುತ್ತಿದ್ದ ಗೂಡ್ಸ್ ವಾಹನಗಳು, ತೆರಿಗೆ ಪಾವತಿಸದೇ ಸಂಚರಿಸುತ್ತಿರುವ ವಾಹನಗಳು, ಟಿಂಟೆಡ್ ಗಾಜು ತೆಗೆದ ಹಿನ್ನೆಲೆಯಲ್ಲಿ ಕಾರಿನ ಒಳಗೆ ಸನ್ ಫಿಲ್ಮ್ ಪೇಪರ್ ಅಂಟಿಸಿಕೊಂಡಿದ್ದು ತಪಾಸಣೆ ವೇಳೆ ಕಂಡುಬಂದಿದ್ದು, ಲಕ್ಷಾಂತರ ರುಪಾಯಿ ತೆರಿಗೆ ಹಾಗೂ ದಂಡ ಬಾಕಿ ಉಳಿಸಿಕೊಂಡಿವೆ. ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT