ಜಿಲ್ಲಾ ಸುದ್ದಿ

ಕೆಇಆರ್‌ಸಿ ಅಧ್ಯಕ್ಷ ಸ್ಥಾನ; ಶಂಕರಲಿಂಗೇಗೌಡ, ಮನೋಳಿ ಹೆಸರು ಕೈಬಿಡಿಲು ಆಪ್ ಆಗ್ರಹ

Mainashree

ಬೆಂಗಳೂರು: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಮಿತಿ ಶಿಫಾರಸು ಮಾಡಿರುವ ನಿವೃತ್ತ ಐಎಎಸ್‌ ಅಧಿಕಾರಿಗಳಾದ ಎಂ.ಕೆ. ಶಂಕರಲಿಂಗೇಗೌಡ ಮತ್ತು ಅಶೋಕ ಕುಮಾರ್‌ ಮನೋಳಿ ಅವರ ಹೆಸರುಗಳನ್ನು ಕೈಬಿಡಬೇಕು ಎಂದು ಎಎಪಿ ಶನಿವಾರ ಆಗ್ರಹಿಸಿದೆ.

ಎಎಪಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ಎಂ.ಕೆ. ಶಂಕಲಿಂಗೇಗೌಡ ಭ್ರಷ್ಟ ಅಧಿಕಾರಿಯಾಗಿದ್ದರು. ಬಿಡಿಎನಲ್ಲಿ ಜಿ ಕೆಟಗರಿ ಸೈಟ್ ಹಂಚಿಕೆಯಲ್ಲಿ ಅಕ್ರಮವೆಸಗಿದ್ದಾರೆ. ಆದರೆ, ಅಂತ ಭ್ರಷ್ಟ ಅಧಿಕಾರಿಯನ್ನೇ ಸರ್ಕಾರ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಹೊರಟಿದೆ. ಆಯ್ಕೆ ಸಮಿತಿ ಶಿಫಾರಸು ಮಾಡಿರುವ ಶಂಕರಲಿಂಗೇಗೌಡ ಮತ್ತು ಅಶೋಕ್ ಕುಮಾರ್ ಮನೋಳಿ ಭ್ರಷ್ಟತೆಯಲ್ಲಿ ಹೆಸರು ಮಾಡಿದಂತ ಅಧಿಕಾರಿಗಳು ಎಂದು ಆರೋಪಿಸಿದ್ದಾರೆ.

ಕಾನೂನು ಬಾಹಿರವಾಗಿ ಶಂಕರಲಿಂಗೇಗೌಡ, ಅಶೋಕ್ ಕುಮಾರ್ ಮನೋಳಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಇಬ್ಬರು ಅಧಿಕಾರಿಗಳಲ್ಲಿ ಒಬ್ಬರನ್ನು ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯ್ಕೆ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಈ ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬಾರದು. ಪ್ರಾಮಾಣಿಕ ಅಧಿಕಾರಿಗಳನ್ನು ಆಯ್ಕೆ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ. 

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಇತ್ತೀಚೆಗೆ ಸಭೆ ಸೇರಿ ಈ ಇಬ್ಬರ ಹೆಸರುಗಳನ್ನು ಸೂಚಿಸಿತ್ತು. ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಈ ಸಮಿತಿಯ ಸದಸ್ಯರಾಗಿದ್ದರು.

SCROLL FOR NEXT