ಜಿಲ್ಲಾ ಸುದ್ದಿ

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಮೇಲೆ ದಬ್ಬಾಳಿಕೆ ಆರೋಪ

Mainashree

ಬೆಂಗಳೂರು: ಚಲನಚಿತ್ರ ರಂಗ ಪ್ರವೇಶಿಸುವ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡುವ ಆಶಯದಿಂದ ರೂಪುಗೊಂಡ 'ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್'ನ ಮ್ಯಾನೇಜಿಂಗ್ ಡೈರೆಕ್ಟರ್ ಮೇಲೆ ದಬ್ಬಾಳಿಕೆ ಆರೋಪ ಕೇಳಿಬಂದಿದೆ.

ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಮ್ಯಾನೇಜಿಂಗ್ ಡೈರೆಕ್ಟರ್ ಎಮ್.ಕಿರಣ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಕೆಲ ಪ್ರಾಧ್ಯಾಕರು ಆರೋಪಿಸಿದ್ದಾರೆ. ಆದರ್ಶ ಸಂಸ್ಥೆಯಲ್ಲಿ ಮೂಲಭೂತ ವ್ಯವಸ್ಥೆಗಳಿಲ್ಲದೆ, ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಸೌಲಭ್ಯವಿಲ್ಲದಿರುವುದರ ಬಗ್ಗೆ ದನಿ ಎತ್ತಿದ ಪರಿಣಾಮ ಕಿರಣ್ ನಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ನಿರ್ದೇಶನ ವಿಭಾಗದ ಅಧ್ಯಾಪಕ ಹಾಗೂ ನಿರ್ದೇಶಕ ಎಸ್.ಎಂ ಪಾಟಿಲ್ ಆಪಾದಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಗುಂಪುಗಾರಿಕೆ ಶುರವಾಗಿದ್ದು, ಗೂಂಡಾಗಳ ತಾಣವಾಗಿದೆ. ಈ ಸಂಸ್ಥೆಗೆ ವಿದ್ಯಾರ್ಥಿಗಳಿಂದ ಹಾಗೂ ಸರ್ಕಾರದಿಂದ ಲಕ್ಷಾಂತರ ರುಪಾಯಿ ಹಣ ಹರಿದು ಬರುತ್ತಿದ್ದು, ಅದನ್ನು ಸಂಸ್ಥೆ ಅಭಿವೃದ್ಧಿಗೆ ಬಳಸದೇ, ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕೆಲ ಪ್ರಾಧ್ಯಾಪಕರು ದನಿ ಎತ್ತಿದ ಪರಿಣಾಮ ಅವರನ್ನು ಕೆಲಸದಿಂದ ತೆಗೆದು ಹಾಕುವುದು, ಸಂಬಳ ನೀಡದೆ, ನಾನು ಹೇಳಿದ ಹಾಗೆ ಕೇಳಿಕೊಂಡು ಇರಬೇಕು ಎಂಬ ಧೋರಣೆ ಹೊಂದಿದ್ದಾರೆ.

ಕೆಲವು ವಿದ್ಯಾರ್ಥಿಗಳಿಗೆ ಹಣ, ಮದ್ಯಪಾನ ಒದಗಿಸುತ್ತಿರುವ ಕಿರಣ್, ನಮ್ಮ ವಿರುದ್ಧ ಪ್ರತಿಭಟಿಸುವಂತೆ ಹುನ್ನಾರ ನಡೆಸಿದ್ದಾರೆ. ಆ ವಿದ್ಯಾರ್ಥಿಗಳು ಅಧ್ಯಾಪಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಸಮಯ ಸಿಕ್ಕಾಗ ಹೊಡೆಯುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದರ ಪರಿಣಾಮ ನಾವು ಆದರ್ಶ ಸಂಸ್ಥೆಗೆ ಹೋಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ವಾರ್ತಾ ಇಲಾಖೆಗೆ ಹಾಗೂ ಎಸ್. ಎಸ್. ಎಲ್. ಸಿ ಬೋರ್ಡಿಗೂ ದೂರು ನೀಡಲಾಗಿದೆ. ಆದರೆ, ಅವರು ತೆಗೆದುಕೊಂಡ ಕ್ರಮದ ತಿಳಿದು ಬಂದಿಲ್ಲ. ಹಲವು ವರ್ಷಗಳಿಂದ ಅದೇ ಸಂಸ್ಥೆಯಲ್ಲಿ ದುಡಿಯುತ್ತಾ ಬಂದಿರುವ ನಮಗೆ ನ್ಯಾಯ ಒದಗಿಸಿಕೊಡಬೇಕು. ಆಡಳಿತ ಮಂಡಳಿ ದಬ್ಬಾಳಿಕೆಯನ್ನು ತಡೆಯಬೇಕು. ಈ ಸಂಬಂಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಾಪಕರಾದ ದಳವಾಯಿ(ಅಭಿನಯ ವಿಭಾಗ), ದೇವರಾಜ (ನತ್ಯವಿಭಾಗ), ಶ್ರೀಧರ್(ಅಭಿನಯ ವಿಭಾಗ), ನಿಜಗುಣ(ಯೋಗ ವಿಭಾಗ), ಪ್ರಕಾಶ್ ಮಾಸ್ಟರ್ (ಸಾಹಸ ವಿಭಾಗ) ಎಸ್.ಎಮ್ ಪಾಟೀಲ್ (ನಿರ್ದೇಶನ ವಿಭಾಗ ಅಲ್ಪಾವಧಿ) ಹಾಜರಿದ್ದರು.

SCROLL FOR NEXT