ಬೆಳ್ಳಂದೂರು ಕೆರೆ (ಕೃಪೆ wkitravel.com) 
ಜಿಲ್ಲಾ ಸುದ್ದಿ

ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಇಎಂ-1 ಬ್ಯಾಕ್ಟೀರಿಯಾ

ರಾಸಾಯನಿಕ ವಿಷ ಮಿಶ್ರಿತ ನೊರೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ನಗರದ ಬೆಳ್ಳಂದೂರು ಕೆರೆ ರಕ್ಷಣೆಗೆ ಕೊನೆಗೂ ಸಂಬಂಧಪಟ್ಟ ಇಲಾಖೆ ...

 ಕೆ.ಆರ್.ಪುರ:  ರಾಸಾಯನಿಕ ವಿಷ ಮಿಶ್ರಿತ ನೊರೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ನಗರದ ಬೆಳ್ಳಂದೂರು ಕೆರೆ ರಕ್ಷಣೆಗೆ ಕೊನೆಗೂ ಸಂಬಂಧಪಟ್ಟ ಇಲಾಖೆ ಮುಂದಾಗಿದೆ. ಸದ್ಯ ತ್ವರಿತವಾಗಿ ಕೆರೆ ಶುದ್ಧೀಕರಣ ಕಾರ್ಯಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಮತ್ತು ಜಲಮಂಡಳಿ ವತಿಯಿಂದ ಇಎಂ-1 ಎಂಬ ದ್ರವರೂಪದ ಬ್ಯಾಕ್ಟೀರಿಯವನ್ನು ಕೆರೆಗೆ ಸಿಂಪಡಿಸುವ ಮೂಲಕ ಶುದ್ಧೀಛೀಕರಣ ಕಾರ್ಯಕ್ಕೆ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿದೆ. ಕೈಗಾರಿಕೆಗಳಿಂದ ಹರಿ ಬಿಡುವ ರಾಸಾಯನಿಕಯುಕ್ತ ಮತ್ತು ಕೊಳಚೆ ನೀರು ಸಮಸ್ಯೆಗೆ ಕಾರಣವಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ನೀರು ಶುದ್ಧೀಕರಣ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಎಂರೋ-ಜಪಾನ್ ಪೇಟೆಂಟ್‍ನ ಇಎಂ-1 ಹೆಸರಿನ ದ್ರವರೂಪದ ಬ್ಯಾಕ್ಟೀರಿಯಾವನ್ನು ಕೆರೆ ನೀರಿಗೆ ಬಿಡಲು ತೀರ್ಮಾನಿಸಿದ್ದು, ಬೆಳ್ಳಂದೂರು ಕೆರೆಗೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಒಂದು ಲೀ. ದ್ರವರೂಪದ ಬ್ಯಾಕ್ಟೀರಿಯ ಒಂದು ಲಕ್ಷ ಲೀ. ಕಲುಷಿತ ನೀರನ್ನು ಶುದ್ದಿಗೊಳಿಸುವ ಸಾಮರ್ಥ್ಯ ಹೊಂದಿದೆ. ಒಮ್ಮೆ ಈ ಔಷಧವನ್ನು ಸಿಂಪಡಿಸಿದರೆ ಏಳು ದಿನಗಳ ಕಾಲ ಇದರ ಪರಿಣಾಮ ಇರುತ್ತದೆ.
ಅಲ್ಲದೆ ನೀರಿನಲ್ಲಿನ ನೈಸರ್ಗಿಕವಾದ ಪ್ರಕೃತಿದತ್ತ ಸೂಕ್ಷ್ಮಾಣು ಜೀವಿಗಳಾದ ಲ್ಯಾಕ್ಟೋಬೇಸಲ್, ಈಸ್ಟ್ (ಬ್ರೆಡ್‍ನಿಂದ ಆಗುವ ಉತ್ಪತ್ತಿ), ಗಾಳಿ ಇರುವ ಮತ್ತು ಇಲ್ಲದಿರುವ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಎಲ್ಲಾ ರೀತಿಯಾದ ಕ್ರಿಮಿಕೀಟಗಳನ್ನು ತಡೆಹಿಡಿಯುವ ಮೂಲಕ ಕೆರೆಯ ರಾಸಾಯನಿಕ ಕಲ್ಮಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಿದೆ ಎಂದು ಪ್ರೊಪರ್ಟಿಲೂಪ್ ಸಂಸ್ಥೆಯ ಮುಖ್ಯಸ್ಥ ಕಿರಣ್ ಪಿ. ಕುಲಕರ್ಣಿ ತಿಳಿಸಿದರು.
ಸದ್ಯ 919 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಆವರಿಸಿಕೊಂಡಿರುವ ಈ ಕೆರೆಗೆ ಸರಿ ಸುಮಾರು 10 ರಿಂದ 15 ಸಾವಿರ ಲೀಟರ್ ನಷ್ಟು ಇಎಂ.1 ಬ್ಯಾಕ್ಟೀರಿಯ ಬೇಕಿದ್ದು ಖಾಸಗಿ ಸಹಭಾಗಿತ್ವದಲ್ಲಿ ಹಣವನ್ನು ಸಂಸ್ಥೆಗೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಕುರಿತಂತೆ ಪ್ರತಿಷ್ಟಿತ ಟೈಟಾನ್, ಟಿಸಿಎಸ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದ್ದು, ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿರುವುದಾಗಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್