ಜಿಲ್ಲಾ ಸುದ್ದಿ

ತಂಬಾಕು ಅಪಾಯದ ಬಗ್ಗೆ ಜಾಗೃತಿ ಮೂಡಿಸಿ: ಡಾ.ಸಯ್ಯದ್ ತೌಶೀದ್

Mainashree

ಬೆಂಗಳೂರು: ಮನುಷ್ಯನ ದೇಹದೊಳಗೆ ನುಸುಳಿ, ಹಂತ ಹಂತವಾಗಿ ಕೊಲ್ಲುವ ತಂಬಾಕು ಸೇವನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಾರಾಯಣ ಹೃದಯಾಲದ ವೈದ್ಯರಾದ ಡಾ.ಸಯ್ಯದ್ ತೌಶೀದ್ ಶನಿವಾರ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ತಂಬಾಕು ಸೇವನೆ ಜಾಗೃತಿ ಬಗ್ಗೆ ಸಿಪ್ಲಾ ಕಂಪನಿ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರೂ ಕೂಡ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದಿದ್ದಾರೆ.

ವಿಶ್ವ ಅತಿ ಹೆಚ್ಚು ತಂಬಾಕು ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನದಲ್ಲಿದೆ. 112ಮಿಲಿಯನ್ ಜನಸಂಖ್ಯೆ ಇರುವ ಭಾರತದಲ್ಲಿ 1.3 ಬಿಲಿಯನ್ ಧೂಮಪಾನಿಗಳಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ ಅವರು, ಇದೇ ಪರಿಸ್ಥಿತಿ ಮುಂದುವರೆದರೆ, 2020ರ ವೇಳೆಗೆ ಸಾವಿನ ಸಂಖಅಯೆ ಶೇ.13ರಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

SCROLL FOR NEXT