ಟಿ. ಎಂ. ವಿಜಯ್ ಭಾಸ್ಕರ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ನೀರಿನ ಅಕ್ರಮ ಸಂಪರ್ಕ ಪತ್ತೆಗೆ ತಿಂಗಳ ಗಡುವು

ಬೆಂಗಳೂರಿನ ಅನಧಿಕೃತ ನೀರಿನ ಸಂಪರ್ಕ ಪತ್ತೆ ಹಚ್ಚಲು ಜಲಮಂಡಳಿ ಅಧ್ಯಕ್ಷ ಟಿ. ಎಂ. ವಿಜಯ್ ಭಾಸ್ಕರ್ ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ವಿಧಿಸಿದ್ದಾರೆ...

ಬೆಂಗಳೂರು: ಬೆಂಗಳೂರಿನ ಅನಧಿಕೃತ ನೀರಿನ ಸಂಪರ್ಕ ಪತ್ತೆ ಹಚ್ಚಲು ಜಲಮಂಡಳಿ ಅಧ್ಯಕ್ಷ ಟಿ. ಎಂ. ವಿಜಯ್ ಭಾಸ್ಕರ್ ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ವಿಧಿಸಿದ್ದಾರೆ.

ಸೋಮವಾರ ಕರೆಯಲಾಗಿದ್ದ ಜಲಮಂಡಳಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅನಧಿಕೃತ ನೀರು ಮತ್ತು ಒಳಚರಂಡಿ ಸಂಪರ್ಕ, ಗೃಹೇತರ ಬಳಕೆದಾರರು, ಗೃಹ ಬಳಕೆ ಹಣ ಪಾವತಿಸುತ್ತಿರುವುದು, ಕೊಳವೆಬಾವಿ ಇದ್ದೂ ದಾಖಲಿಸದೇ ಇರುವುದು. ಪ್ರೊರೇಟಾ ದಾಖಲಿಸದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಒಂದು ತಿಂಗಳ ಗಡುವು ನೀಡಿದರು. ನವೆಂಬರ್  ಅಂತ್ಯದೊಳಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡುವಂತೆಯೂ ಸೂಚಿಸಿದರು.

`` ಜನರಿಗೆ ನೀಡುತ್ತಿರುವ ಸೇವೆ ಉತ್ಕೃಷ್ಟವಾಗಿದೆ. ಆದರೆ, ಲೆಕ್ಕಕ್ಕೆ ಸಿಗದ ನೀರಿಗೆ ಸಂಬಂಧಿಸಿದಂತೆ ಮಂಡಳಿಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಸಮಾಧಾನವಿದೆ. ಅದನ್ನು ಕಡಿಮೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಕ್ರಮ ತಡೆಗೆ ಮೂರು ವಿಭಾಗಗಳಲ್ಲಿ ಸಮೀಕ್ಷೆ ನಡೆದಿದೆ. ಅಲ್ಲಿ ಶೇ. 3 ರಷ್ಟು ಕಟ್ಟಗಳಿಗೆ ಮಂಡಳಿಯ ಆರ್‍ಆರ್ ಸಂಖ್ಯೆ ಇಲ್ಲದಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ದಾಖಲೆಗೆ ಸಿಗದ ಒಂದೂವರೆ ಲಕ್ಷದಷ್ಟು ಕೊಳವೆಬಾವಿ ಪತ್ತೆ ಹಚ್ಚಿದಲ್ಲಿ ಮಂಡಳಿಗೆ ವಾರ್ಷಿಕ ರು.18 ಕೋಟಿ ಆದಾಯ ಸಿಗಲಿದೆ,'' ಎಂದು ತಿಳಿಸಿದರು.

ರಕ್ಷಣಾ ವ್ಯವಸ್ಥೆ : ಡಿಸೆಂಬರ್ ಒಂದರಿಂದ ಪ್ರೋರೇಟಾ ದರಗಳು ದುಪ್ಪಟ್ಟಾಗಲಿವೆ. ಈ ಬಗ್ಗೆ ಜನರಿಗೆ ತಿಳಿಸಬೇಕು. ಪ್ರತಿ ಬಾರಿ ಮೀಟರ್ ರೀಡಿಂಗ್‍ಗೆ ತೆಳಿದಾಗ ಅನಧಿಕೃತ ಸಂಪರ್ಕಗಳಿದ್ದರೆ ಪತ್ತೆಹಚ್ಚಬೇಕು. ಪರಿಶೀಲನೆಗೆ ತೆರಳಿದಾಗ ಬೆದರಿಕೆ ಹಾಕಲಾಗುತ್ತಿದೆ. ಅಂಥ ಸನ್ನಿವೇಶದಲ್ಲಿ ರಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ಎಲ್ಲರೂ ಧೈರ್ಯದಿಂದ ಕಾರ್ಯನಿರ್ವಹಿಸಬಹುದು. ಹಾಗೊಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ಸ್ಥಳದಲ್ಲೆ ನೋಟಿಸ್ ಕೊಡಿ. ಸಂಪರ್ಕ ಸರಿಪಡಿಸಿಕೊಳ್ಳದವರ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕಿ,'' ಎಂದು ಸಲಹೆ ನೀಡಿದರು. ಅಧಿಕಾರಿಗಳ ನೇಮಕ: ಕ್ರಿಮಿನಲ್ ಪ್ರಕರಣಗಳಿಗೆ ಹಾಜರಾಗಲು ಕೇಂದ್ರ ಕಚೇರಿಯಿಂದ ವಲಯವಾರು ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT