ಬೆಂಗಳೂರು: ರಾಜ್ಯಕ್ಕೆ ಹಿಂಗಾರು ಕಾಲಿಟ್ಟಿದ್ದು, ಮೊದಲ ದಿನವೇ ಜೋರು ಮಳೆಯೊಂದಿಗೆ ಅಬ್ಬರ ಆರಂಭಿಸಿದೆ.
ಅಕ್ಟೋಬರ್ 28 ರಂದು ತಮಿಳುನಾಡು ಪ್ರವೇಶಿಸಿದ ಹಿಂಗಾರು ತಡವಾಗಿ ಕರ್ನಾಟಕ ಪ್ರವೇಶ ಮಾಡಿದೆ. ಇದರ ಪರಿಣಾಮ ಈಗಾಗಲೇ ಉತ್ತರ ಒಳನಾಡಿನಲ್ಲಿ ಮಳೆ ಆರ್ಭಟ ಆರಂಭವಾಗಿದ್ದು, ಇನ್ನೆರಡು ದಿನ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯೊಂದಿಗೆ ಸದ್ದು ಮಾಡಲಿದೆ.
ತಮಿಳುನಾಡಿನ ಅನೇಕ ಭಾಗದಲ್ಲಿ ಭಾರಿ ಮಳೆ ತಂದಿರುವ ಹಿಂಗಾರು ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಹಾಸನ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸುರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ 50 ಮಿ.ಮಿ ವರೆಗೂ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕಿ ಗೀತಾ ಹೇಳಿದ್ದಾರೆ.