ಜಿಲ್ಲಾ ಸುದ್ದಿ

ಅಸಹಿಷ್ಣುತೆ ಪ್ರತಿಭಟನಾಕಾರರ ವಿರುದ್ಧ ನ.7 ರಂದು ಕ್ರಿಯೇಟಿವ್ ಇಂಡಿಯಾದಿಂದ ಕಾಲ್ನಡಿಗೆ ಜಾಥ

Srinivas Rao BV

ಬೆಂಗಳೂರು: ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ವಾಪಸ್ ನೀಡುತ್ತಿರುವವರ ವಿರುದ್ಧ ಕ್ರಿಯೇಟೀವ್ ಇಂಡಿಯಾ ಸಂಘಟನೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.
ನವೆಂಬರ್ 7 ರಂದು ಬೆಳಿಗ್ಗೆ 11 ಕ್ಕೆ ಫ್ರೀಡಂ ಪಾರ್ಕ್ ನಿಂದ ಪ್ರಾರಂಭವಾಗಲಿರುವ ಕಾಲ್ನಡಿಗೆ ಜಾಥ, ರಾಜಭವನದವರೆಗೆ ನಡೆಯಲಿದೆ. ನಂತರ ಪ್ರಶಸ್ತಿ ಹಿಂತಿರುಗಿಸುವಿಕೆ ಹಾಗೂ ಅಸಹಿಷ್ಣುತೆ ಇದೆ ಎಂದು ಆರೋಪಿಸುತ್ತಿರುವವರ ವಿರುದ್ಧ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಗುತ್ತದೆ.
ಪ್ರಶಸ್ತಿ ಹಿಂತಿರುಗಿಸುವುದು ಹಾಗೂ ಅಸಹಿಷ್ಣುತೆ ಇದೆ ಎಂದು ಆರೋಪಿಸುತ್ತಿರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸಲು ಸಂಚು ರೂಪಿಸಲಾಗಿದೆ ಎಂದು ಕಾಲ್ನಡಿಗೆ ಜಾಥದಲ್ಲಿ ಪಾಲ್ಗೊಳ್ಳಲಿರುವ ಸದಸ್ಯರು ಆರೋಪಿಸಿದ್ದಾರೆ.
ಕಾಲ್ನಡಿಗೆ ಜಾಥದಲ್ಲಿ ಶತವಾಧಾನಿ ಗಣೇಶ್, ಡಾ.ಚಿದಾನಂದ ಮೂರ್ತಿ,ಸುಮತೀಂದ್ರ ನಾಡಿಗ,ಚಿತ್ರ ನಟರಾದ ಅವಿನಾಶ್,ಜಗ್ಗೇಶ್,ತಾರಾ,ಮಾಳವಿಕ,ಜೈ ಜಗದೀಶ್ ಸೇರಿದಂತೆ ವಿವಿಧ ರಂಗದ ಕಲಾವಿದರು, ಬರಹಗಾರರು,ಸಮಾಜ ಸೇವಕರು ಭಾಗವಹಿಸಲಿದ್ದಾರೆ.
ಇದೆ ಮಾದರಿಯಲ್ಲಿ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಸಹ ದೆಹಲಿಯಲ್ಲಿ ನ.7 ರಂದು ಇಂಡಿಯಾ ಇಸ್ ಟಾಲರೆಂಟ್ ಅಡಿ ಬರಹದಲ್ಲಿ ಅಸಹಿಷ್ಣುತೆ ಪ್ರತಿಭಟನಾಕಾರರ ವಿರುದ್ಧ  ಮಾರ್ಚ್ ಫಾರ್ ಇಂಡಿಯಾ ಪ್ರತಿಭಟನೆ ಮೆರವಣಿಗೆ ನಡೆಸಲಿದ್ದಾರೆ.

SCROLL FOR NEXT