ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ನ್ಯಾಯಾಲಯ ಕಲಾಪ ಪತ್ರಕರ್ತರ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ 
ಜಿಲ್ಲಾ ಸುದ್ದಿ

ಸುದ್ದಿ ಜಾಗದಲ್ಲಿ ಜಾಹೀರಾತು ಬೇಡ: ಸಂತೋಷ ಹೆಗ್ಡೆ

ಪತ್ರಿಕೆಗಳು ಗಳಿಸುವ ಸಂಪತ್ತು, ಮೌಲ್ಯದ ಆಧಾರಕ್ಕೆ ಬದ್ಧವಾಗಿರಬೇಕೆ ವಿನಃ ಸುದ್ದಿ ಪ್ರಕಟಿಸುವ ಜಾಗದಲ್ಲಿ ಹೆಚ್ಚು ಜಾಹೀರಾತು...

ಬೆಂಗಳೂರು: ಪತ್ರಿಕೆಗಳು ಗಳಿಸುವ ಸಂಪತ್ತು, ಮೌಲ್ಯದ ಆಧಾರಕ್ಕೆ ಬದ್ಧವಾಗಿರಬೇಕೆ ವಿನಃ ಸುದ್ದಿ ಪ್ರಕಟಿಸುವ ಜಾಗದಲ್ಲಿ ಹೆಚ್ಚು ಜಾಹೀರಾತು ತುಂಬಿ ಓದುಗರ ಹಕ್ಕುಗಳನ್ನು ಕಸಿದುಕೊಳ್ಳುವಂತಿರಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಹೇಳಿದರು. 
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ನ್ಯಾಯಾಲಯ ಕಲಾಪ ಪತ್ರಕರ್ತರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಂಪತ್ತು ಗಳಿಸಬೇಕು. ಆದರೆ, ಅದು ಮೌಲ್ಯದ ಆಧಾರದಿಂದ ಗಳಿಸಿರುವಂತಿರಬೇಕು. 
ಸುದ್ದಿ ಬದಲು ಜಾಹೀರಾತು ಕಡೆಗೆ ಹೆಚ್ಚು ವಾಲುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳಿಗೆ ರೀತಿ ನೀತಿ ಇರಬೇಕಾದ ಅವಶ್ಯಕತೆ ಇದೆ. ಇತ್ತೀಚೆಗಂತೂ ಪತ್ರಿಕೆಗಳನ್ನು ನೋಡಿದರೆ ಮೊದಲ ಪುಟದಲ್ಲೇ ಜಾಹೀರಾತು ತುಂಬಿರುತ್ತದೆ. ಸುದ್ದಿಗಳೆಲ್ಲ ನಂತರದ ಪುಟಗಳಿಗೆ ಹೋಗಿರುತ್ತವೆ. ಚಿಕ್ಕಂದಿನಿಂದ ಓದುತ್ತಿದ್ದ ಪತ್ರಿಕೆಯೂ ಹೀಗೇ ಆಗಿದೆ. 
ತುರ್ತು ಪರಿಸ್ಥಿತಿಯಲ್ಲಿ ಜವಾಬ್ದಾರಿ ಮೆರೆದಿತ್ತು ಎಂಬ ಕಾರಣಕ್ಕೆ ಇಂದಿಗೂ ಮನೆಗೆ ತರಿಸುತ್ತಿರುವ ಪತ್ರಿಕೆಯನ್ನು ಓದಲು ಆಗುತ್ತಿಲ್ಲ ಎಂದು ವಿಷಾದಿಸಿದರು. ಮೌಲ್ಯಗಳ ಕುಸಿತ: ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿದೆ. ಯಾವುದೇ ಕಾರಣಕ್ಕೂ ಜನರಿಗೆ ಸುಳ್ಳು ಸುದ್ದಿಗಳನ್ನು ನೀಡದಂತೆ ಎಚ್ಚರವಹಿಸಬೇಕು. 
ಇತ್ತೀಚೆಗೆ ಆ ಮೌಲ್ಯಗಳು ಕುಸಿಯುತ್ತಿವೆ. ಇದನ್ನು ರಕ್ಷಿಸುವ ಪ್ರಯತ್ನ ಎಲ್ಲ ವಿಭಾಗಗಳಿಂದಲೂ ನಡೆಯಬೇಕು. ಮುಖ್ಯವಾಗಿ ಮಾಧ್ಯಮ ವಲಯ ತೋರಬೇಕು. ನಮ್ಮ ವೃತ್ತಿ ಜೀವನದಲ್ಲಿ ತೃಪ್ತಿ ಭಾವ ಮತ್ತು ಮಾನವೀಯತೆ ಈ ಎರಡು ಗುಣಗಳನ್ನು ಬೆಳೆಸಿಕೊಳ್ಳಬೇಕು. 
ಸಿದ್ದಯ್ಯ ಪುರಾಣಿಕರು ಹೇಳುವಂತೆ, ಏನಾದರು ಆಗು ಮೊದಲು ಮಾನವನಾಗು ಎಂಬ ಮಾತನ್ನು ಸದಾ ಜ್ಞಾಪಿಸಿಕೊಳ್ಳುತ್ತಿರಬೇಕು ಎಂದರು ನ್ಯಾ.ಸಂತೋಷ ಹೆಗ್ಡೆ. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ  .ಎನ್.ಕುಮಾರ್, ಸಂವಿಧಾನವೇ ನಮಗೆ ಪ್ರಧಾನವಾಗಬೇಕು. ಪತ್ರಿಕಾ ಸ್ವಾತಂತ್ರ್ಯದ ಹಕ್ಕುಗಳನ್ನು ಪ್ರತಿಪಾದಿಸುವುದರ ಜತೆಗೆ ಸಾಮಾನ್ಯ ಜನರ ಹಕ್ಕುಗಳಿಗೂ ಗೌರವ ನೀಡುವುದನ್ನು ಕಲಿಯಬೇಕು. 
ಮೂರೂ ಅಂಗಗಳನ್ನು ಮೀರಿಸುವಷ್ಟರ ಮಟ್ಟಿಗೆ ಪತ್ರಿಕಾರಂಗ ಸಾಗುತ್ತಿದೆ. ಪತ್ರಿಕೆ ಜನರ ಕಣ್ಣು, ಕಿವಿಯಾಗಿದೆ. ಅವರ ಪರವಾಗಿ ದನಿ ಎತ್ತುತ್ತಾರೆ. ಮಾಧ್ಯಮದ ಪ್ರಭಾವ ಸಮಾಜದ ಮೇಲೆ ಅಗಾಧವಾಗಿದೆ. ಮನಸ್ಸು ಮಾಡಿದರೆ ಯಾವುದೇ ಒಬ್ಬ ವ್ಯಕ್ತಿ, ಸಂಸ್ಥಯನ್ನು ಬೆಳೆಸಬಹುದು ಅಥವಾ ನಾಶ ಮಾಡಬಹುದು ಎಂದರು. 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಶನ್ ಬೇಗ್, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕಾರ್ಯದರ್ಶಿ ಎಸ್. ಶಂಕರಪ್ಪ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT