ಜಿಲ್ಲಾ ಸುದ್ದಿ

ರಾಡಿ ಎಬ್ಬಿಸುತ್ತಿವೆ ಇಂದಿನ ಚಿತ್ರ ಗೀತೆಗಳು

Srinivasamurthy VN

ಬೆಂಗಳೂರು: ``ಇತ್ತೀಚೆಗೆ ಬರುತ್ತಿರುವ ಚಲನಚಿತ್ರ ಗೀತೆಗಳು ಕೊಳಕು ರಾಡಿಯಂತಿರುತ್ತವೆ. ಗರ್ತಿಕೆರೆ ರಾಘಣ್ಣ ಯಾವ ಆಡಂಭರವೂ ಇಲ್ಲದೆ ಹೃದಯದಿಂದ ಹಾಡುತ್ತಾರೆ. ಅವರನ್ನು ಹೃದಯದ ಗಾಯಕ ಎಂದು ಕರೆಯಲು ನಮಗೆ ಖುಷಿಯಾಗುತ್ತದೆ ಎಂದು ಗೀತ ರಚನೆಕಾರ ಬಿ.ಆರ್. ಲಕ್ಷ್ಮಣ್ ರಾವ್ ಅಭಿಪ್ರಾಯಪಟ್ಟರು.

ಶ್ರೀ ಭಾರತೀ ಪ್ರಕಾಶನದಿಂದ ಭಾನುವಾರ ರಾಜಾಜಿನಗರದ ಚರಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ಎಂದಾದರೊಂದು ದಿನ' ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಿದ ಅವರು, ``ರಾಘಣ್ಣ ಅವರದು ಹೃದಯ ಮುಟ್ಟುವ ಗಾಯನ ಶೈಲಿ. ಅವರು ಹಾಡಿದ ಹಾಡುಗಳನ್ನು ಬೇರೆಯವರು ಹಾಡುವಾಗ ಎಚ್ಚರವಹಿಸಬೇಕು. ಇಲ್ಲದಿದ್ದರೆ ಹಾಡಿಗೆ ಧಕ್ಕೆಯಾಗುತ್ತದೆ.

ಅವರ ಹಲವಾರು ಸಂಗೀತ ಸಂಯೋಜನೆ ಕೇಳಿದಾಗ ಯಾವುದೇ ರಾಗಗಳು ಪುನರಾವರ್ತನೆ ಆಗದಿರುವುದು ಸ್ಪಷ್ಟವಾಗುತ್ತದೆ. ರಾಗಗಳನ್ನು ಸೃಜನಶೀಲವಾಗಿ ಬಳಸುತ್ತಾರೆ. ಸಾಹಿತ್ಯ, ಸಂದರ್ಭಕ್ಕೆ ತಕ್ಕಂತೆ ಹಾಡು ಹೊಸದಾಗಿರುತ್ತದೆ. ರಾಘಣ್ಣ ಯಾವುದೇ ಹಾಡು ತೆಗೆದುಕೊಳ್ಳಲಿ, ಪರಿಶುದಟಛಿವಾದ ಕರ್ನಾಟಕ ಸಂಗೀತ ರಾಗಗಳನ್ನೆ ಅವುಗಳಿಗೆ ಅಳವಡಿಸುತ್ತಾರೆ. ಹಾಗಾಗಿ ಅವರ ಹಾಡುಗಳು ನಮ್ಮ ಮನಸ್ಸನ್ನು ತಟ್ಟುತ್ತದೆ,'' ಎಂದರು.

``ಇತ್ತೀಚೆಗೆ ಬರುತ್ತಿರುವ ಚಲನಚಿತ್ರ ಗೀತೆಗಳು ಕೊಳಕು ರಾಡಿಯಂತಿರುತ್ತವೆ. ಈ ಮಾತನ್ನು ನಾನು ಹೆಚ್ಚು ಬೆಳೆಸುವುದಕ್ಕೆ ಹೋಗುವುದಿಲ್ಲ. ರಾಘಣ್ಣ ಹಾಡುವ ಹಾಡುಗಳು ಸಾಹಿತ್ಯವನ್ನು ಸುರಿಸುತ್ತವೆ. ಆ ಸಾಹಿತ್ಯದಲ್ಲಿ ಭಕ್ತಿ, ರಕ್ತಿ, ಅನುರಕ್ತಿ ಎಲ್ಲವೂ ಸೇರಿರುತ್ತದೆ. ಕೇಳುಗರಲ್ಲಿ ಹದವಾದ ಶಕ್ತಿ ಪ್ರವಹಿ ಸುತ್ತದೆ. ಅವರ ಗಾಯನ ಶಕ್ತಿ ಕುರಿತು ಇಷ್ಟೆಲ್ಲಾ ಹೇಳುವ ಸಂಗತಿಗಳು ಇದ್ದುದ್ದರಿಂದ ಕಾರ್ಯಕ್ರಮಕ್ಕೆ ಬಂದೆ,'' ಎಂದರು.

ಡಾ. ಗಜಾನನ ಶರ್ಮಾ ಅವರ `ಕಾಡು ಕಣಿವೆ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ' ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಜೋಗಿ ಮಾತನಾಡಿ, ``ಇಂತಹ ಕೃತಿ ಓದಿದಾಗ ಸ್ವಾರ್ಥ ಕಡಿಮೆಯಾಗುತ್ತದೆ. ಸಾರ್ಥಕ್ಯ ಭಾವ ಹೆಚ್ಚಾಗುತ್ತದೆ. ಮಾಧುರ್ಯ ತುಂಬಿದ, ಸುಶ್ರಾವ್ಯ ಗೀತೆಗಳನ್ನು ಹಾಡಿದ ರಾಘಣ್ಣರ ಬಗೆಗಿನ ಪುಸ್ತಕವನ್ನು ಜ್ವರ ಬಂದರೂ ಓದದೆ ಬಿಡಲಿಲ್ಲ. ಹೊಸ ದನಿ, ಇಂಪು, ಮಾಧುರ್ಯ, ಕವಿ ಭಾವ ತುಂಬಿದ ಪುಸ್ತಕ ಇದಾಗಿದೆ,'' ಎಂದರು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ
ಸ್ವಾಮೀಜಿ, ಲೇಖಕ ಡಾ. ಗಜಾನನ ಶರ್ಮಾ ಸೇರಿದಂತೆ ಮತ್ತಿತರರು ಇದ್ದರು.

SCROLL FOR NEXT