ಜಿಲ್ಲಾ ಸುದ್ದಿ

ಅಣಶಿ ಅಭಯಾರಣ್ಯಕ್ಕೆ ಚೆನ್ನಬಸವಣ್ಣನವರ ಹೆಸರಿಡಲು ಮನವಿ

Srinivas Rao BV

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಣಶಿ ಅಭಯಾರಣ್ಯಕ್ಕೆ ವಚನ ಸಾಹಿತ್ಯ ಸಂರಕ್ಷಣೆಗೆ ಹೋರಾಡಿದ ಚೆನ್ನಬಸವಣ್ಣ ನವರ ಹೆಸರಿಡುವಂತೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಮೊದಲ ಬಾರಿಗೆ ಸನಾತನ ಸಾಂಪ್ರದಾಯಿಕ ವ್ಯವಸ್ಥೆ ವಿರುದ್ಧ ಬಸವಣ್ಣನವರ ಹಿರಿತನದಲ್ಲಿ ಮಾನವ ಘನತೆ, ಸ್ತ್ರೀ-ಪುರುಷ ಸಮಾನತೆ, ಸಾಮಾಜಿಕ ಸಮಾನತೆ, ಕಾಯಕ ಗೌರವವನ್ನು ಶರಣದ ಆಂದೋಲನ ಹುಟ್ಟು ಹಾಕಿತು. ಈ ವೇಳೆ ಸಂಪ್ರದಾಯವಾದಿಗಳು ವಚನ ಸಾಹಿತ್ಯದ ಸೊಲ್ಲಡಗಿಸಲು ನಡೆಸಿದ ಹುನ್ನಾರದ ನಡುವೆಯೂ, ಕೆಲ ಶರಣರು ವಚನ ಸಾಹಿತ್ಯ ಉಳಿಸುವಲ್ಲಿ ಪ್ರಯತ್ನಿಸಿದ್ದರು. ಈ ಪೈಕಿ ಚೆನ್ನಬಸವಣ್ಣನವರು ಪ್ರಮುಖರಾಗಿದ್ದಾರೆ. ಚೆನ್ನಬಸವಣ್ಣನವರ ನೇತೃತ್ವದ ತಂಡ ವಚನ ಸಾಹಿತ್ಯ ಉಳಿವಿಗಾಗಿ ಕಲ್ಯಾಣದಿಂದ ಪ್ರಯಾಣ ಆರಂಬಿsಸಿದ್ದು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪ್ರದೇಶದ ಅಣಶಿ ಅರಣ್ಯ ಮಾರ್ಗವಾಗಿ. ಹೀಗಾಗಿ ಇಲ್ಲಿನ ವೈಚಾರಿಕ ಮಹತ್ವ ಪರಿಗಣಿಸಿ, ಲಕ್ಷಾಂತರ ಜನರ ಯಾತ್ರ ಸ್ಥಳವಾಗಿರುವ ಅಣಶಿ ಅರಣ್ಯಕ್ಕೆ ಚೆನ್ನಬಸವಣ್ಣ ಅಭಯಾರಣ್ಯ ಎಂದು ನಾಮಕರಣ ಮಾಡುವುದು ಶರಣರಿಗೆ ಸಲ್ಲಿಸುವ ಗೌರವ ಎಂದು ಪರಿಷತ್ ಅಧ್ಯಕ್ಷರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

SCROLL FOR NEXT