ಹೊಸಪೇಟೆ: ಟಿಪ್ಪು ಜಯಂತಿ ಬಹಿಷ್ಕರಿಸುವಂತೆ ಬಿಜೆಪಿ ತನ್ನ ಶಾಸಕರಿಗೆ ನೀಡಿದ್ದ ಸೂಚನೆ ಧಿಕ್ಕರಿಸಿ ಹೊಸಪೇಟೆ ಶಾಸಕ ಬಿ.ಎಸ್. ಆನಂದ್ ಸಿಂಗ್ ಮಂಗಳವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಗರದ ಟೌನ್ ರೀಡಿಂಗ್ ರೂಮ್ ಆವರಣದಲ್ಲಿ ಟಿಪ್ಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆನಂದ ಸಿಂಗ್, ``ನಾನು ಜಾತ್ಯತೀತ ಪರಂಪರೆ ಬೆಂಬಲಿಸುತ್ತೇನೆ. ರಾಜಕೀಯದ ಮೇಲೆ ಜೀವನ ಮಾಡುವುದಿಲ್ಲ. ಅದನ್ನು ಬಿಡುವ ಸಂದರ್ಭ ಬಂದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ'' ಎಂದು ಹೇಳಿದರು. ಮಾನವ ಧರ್ಮ ದೊಡ್ಡದು, ಪ್ರತಿಯೊಬ್ಬರಿಗೂ ಮಾನವೀಯ ಧರ್ಮ ಅತೀ ಮುಖ್ಯ. ಮಾನವ ಧರ್ಮ
ಇದ್ದಾಗ ಮಾತ್ರ ನಮ್ಮನ್ನು ಸಹಬಾಳ್ವೆ ಬಳಿ ಕೊಂಡೊಯ್ಯುತ್ತದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.