ಡಾ.ಚಂದ್ರಶೇಖರ್ ಕಂಬಾರ 
ಜಿಲ್ಲಾ ಸುದ್ದಿ

ಕಾಂಗ್ರೆಸ್ ಗೆ ಪರ್ಯಾಯ ಬೇಕಿಲ್ಲ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಪರ್ಯಾಯವಾದದ್ದು ಬೇರೊಂದು ಬೇಕಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ...ಪುರಸ್ಕೃತ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಪರ್ಯಾಯವಾದದ್ದು ಬೇರೊಂದು    ಬೇಕಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ತುಮಕೂರು  ಮಹದೇವಯ್ಯ ಮತ್ತು ಪತ್ರಕರ್ತ ಜಿ.ಜಿ. ನಾಗರಾಜ ಅವರ ಸಂಪಾದಕತ್ವದ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ರಾಜಕೀಯ ಬದುಕು, ಜನಪರ ಯೋಜನೆಗಳ ಕುರಿತ 'ಇಟ್ಟಗುರಿ- ದಿಟ್ಟಹೆಜ್ಜೆ' ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಸಿದ್ದರಾಮಯ್ಯನವರು ರಾಜ್ಯದ ಏಳಿಗೆ ಬಗ್ಗೆ ಬಹಳ ಹಿಂದಿನಿಂದಲೂ ಅಪಾರ ಕನಸು ಕಂಡಿದ್ದಾರೆ.  ಜೊತೆಗೆ ಅವರ ತೀರ್ಮಾನಗಳನ್ನು ಗಮನಿಸಿದರೆ, ಈ ಸರ್ಕಾರಕ್ಕೆ ಪರ್ಯಾಯವಾದದ್ದು ಮತ್ತೊಂದು ಇಲ್ಲ. ಹೀಗಾಗಿ ಸಿದ್ದರಾಮಯ್ಯನವರ ಬಗ್ಗೆ ಇಂದಿಗೂ ಅಭಿಮಾನ, ಪ್ರೀತಿಯಿದೆ  ಎಂದು ಕೊಂಡಾಡಿದರು.

ಆಹಾರ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸಿದ್ದರಾಮಯ್ಯನವರು ತಮ್ಮ  ಹೋರಾಟದ ಹಿನ್ನೆಲೆಯಿಂದಲೇ ಮುಖ್ಯಮಂತ್ರಿಯಾಗಿದ್ದರೆ ಹೊರತು, ಯಾರೂ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿಲ್ಲ. ಮುಂದಿನ ಅವಧಿಗೂ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ರಾಜ್ಯದ ಜನತೆಗೆ ಕಾಂಗ್ರೆಸ್‍ನಿಂದ ಸಿಗುತ್ತಿರುವ ಆಶ್ರಯ, ಬೇರಾವ ಪಕ್ಷದಿಂದಲೂ ಸಿಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೈಕಮಾಂಡ್ ಕಟ್ಟಿಹಾಕಿದೆ: ಸಿಎಂ ಸಿದ್ದರಾಮಯ್ಯನವರದು ಕ್ರಿಯಾಶೀಲ ವ್ಯಕ್ತಿತ್ವ. ಆದರೆ,  ಇವರನ್ನು ಪಕ್ಷದ ಹೈಕಮಾಂಡ್ ಕಟ್ಟಿಹಾಕುತ್ತಿದ್ದು, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಾಹಿತಿಗಳು ಸಿದ್ದರಾಮಯ್ಯನವರ ಬಗ್ಗೆ ಬರೆಯುವುದು, ವಿಶ್ವಾಸ  ವ್ಯಕ್ತಪಡಿಸುತ್ತಿರುವುದು ಕೊಂಡುಕೊಳ್ಳುವಿಕೆಯಿಂದಲ್ಲ. ಬದಲಿಗೆ ಅವರ ಜನಪರ ಕೆಲಸದಿಂದ. ಯಡಿಯೂರಪ್ಪ ಸಿಎಂ ಆಗಿದ್ದಾಗ ಮಠಗಳಿಗೆ ನೂರಾರು ಕೋಟಿ ರು.ಕೊಟ್ಟಾಗ, ಯಾರೂ ಚಕಾರವೆತ್ತಲಿಲ್ಲ. ಆದರೆ, ಸಿದ್ದರಾಮಯ್ಯನವರು ಗ್ರಾಮೀಣ ಮಕ್ಕಳ ಪ್ರವಾಸಕ್ಕೆ ತೀರ್ಮಾನಿಸಿದಾಗ, ದೊಡ್ಡ ಗಲಾಟೆ ಎಬ್ಬಿಸಿದ್ದರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ  ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ವಿಶ್ಲೇಷಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT