ಬೆಂಗಳೂರು: ನಿಲಯಾರ್ಥಿಗಳ ಭೋಜನ ದರ ಹೆಚ್ಚಳ, ಬಹುಸಂಖ್ಯಾತ ವಾರ್ಡನ್‍ಗಳಿಗೆ ಮುಂಬಡ್ತಿ ಹಾಗೂ ಇಲಾಖೆಯಲ್ಲಿರುವ ಅನ್ಯ ಇಲಾಖೆ ನೌಕರರನ್ನು ವಾಪಸ್ ಕಳಿಸಬೇಕು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರ ಸಂಘ ಆಗ್ರಹಿಸಿದೆ.
ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಂತರ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಪ್ರಹ್ಲಾದ ಗೆಜ್ಜಿ, ಇಲಾಖೆಯಲ್ಲಿ ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಗೊಂಡ ವಾರ್ಡನ್ ವೃಂದಕ್ಕೆ ವೇತನ ಪರಿಷ್ಕರಣೆ ಮಾಡಬೇಕು.
ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಊಟದ ಭತ್ಯೆ ಸೇರಿದಂತೆ ಸಮವಸ್ತ್ರ, ಲೇಖನ ಸಾಮಗ್ರಿ, ಸಂಕೀರ್ಣ ವಸ್ತುಗಳು ಸೇರಿದಂತೆ ವಿವಿಧ ಭತ್ಯೆಗಳನ್ನು ಹೆಚ್ಚಿಸಬೇಕು ಎಂದರು.