ಜಿಲ್ಲಾ ಸುದ್ದಿ

ಶಕೀಲ್ ಸಹಚರರಿಗೆ ಉಗ್ರರ ನಂಟು

Manjula VN

ಬೆಂಗಳೂರು: ಬೆಂಗಳೂರಿನ ಹಿಂದೂ ರಾಜಕೀಯ ಮುಖಂಡನನ್ನು ಹತ್ಯೆ ಮಾಡಿ, ನಗರ ದಲ್ಲಿ ಕೋಮುಗಲಭೆ ಸೃಷ್ಟಿಸುವ ಸಂಚು ರೂಪಿಸಿ, ನಂತರ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಭೂಗತ ಪಾತಕಿ ಛೋಟಾ ಶಕೀಲ್‍ನ ಸಹಚರರಿಗೆ ಪಾಕಿಸ್ತಾನದಿಂದ ಕರೆಗಳು ಬಂದಿವೆ..!

ಆರೋಪಿಗಳನ್ನು ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರ ಮುಂದೆ ತನಿಖೆ ವೇಳೆ ಈ ಆಘಾತಕಾರಿ ವಿಚಾರ ಬೆಳಕಿಗೆಬಂದಿದೆ. ಹಾಗಾಗಿ ಆರೋಪಿಗಳು ಭಯೋತ್ಪಾದಕ ಸಂಘಟನೆ ಜತೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಡುವೆ ಬೆಂಗಳೂರಿನ ಕೆಲ ಅಪರಾಧ ಹಿನ್ನೆಲೆಯುಳ್ಳ ಯುವಕರು ಐಎಸ್‍ಐಎಸ್ ಉಗ್ರರ ಪರ ಸಕ್ರಿಯವಾಗಿ ಕೆಲ ಮಾಡುತ್ತಿದ್ದು, ಉಗ್ರ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಬಂಧಿತ ಮೂವರು ಛೋಟಾ ಶಕೀಲ್ ನ ಸಹಚರರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಕರೆಯಿಂದ ಖಚಿತ: ವಿಚಾರಣೆ ವೇಳೆ ತಮಗೆ ಯಾವ ಭಯೋತ್ಪಾದಕರ ಪರಿಚಯವೂ ಇಲ್ಲ ಎಂದು ಆರೋಪಿಗಳು ಹೇಳುತ್ತಿದ್ದು, ಈ ಸಂಬಂಧ ಸಣ್ಣ ಸುಳಿವು ಸಹ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಲು ಮುಂದಾಗಿದ್ದು, ಬಂಧಿತ ಆರೋಪಿ ಸೈಯದ್, ಛೋಟಾ ಶಕೀಲ್ ಜತೆ ಸಂಪರ್ಕದಲ್ಲಿರುವುದು ಖಚಿತವಾಗಿದೆ. ಗುಜರಾತ್, ಪಾಕಿಸ್ತಾನದ ಗಡಿ ಪ್ರದೇಶದಲ್ಲಿರುವ ವ್ಯಕ್ತಿಗಳಿಂದ ಸೈಯದ್ ಗೆ ಕರೆಗಳು ಬಂದಿವೆ. ಈತ ಕೂಡ ಹಲವು ಬಾರಿ ಅವರಿಗೆ ಕರೆ ಮಾಡಿ ಮಾತನಾಡಿರುವುದು ತನಿಖೆ ವೇಳೆ ದೃಢಪಟ್ಟಿದೆ.

ಆದರೆ ಐಎಸ್‍ಐಎಸ್ ಉಗ್ರರ ಸಂಪರ್ಕವಿರುವ ಬಗ್ಗೆ ಮಾತ್ರ ಯಾವು ದೇ ಸಾಕ್ಷ್ಯ ಲಭ್ಯವಾಗಿಲ್ಲ. ಈ ಹಿನ್ನೆಲೆ ಯಲ್ಲಿ ಆಂತರಿಕ ಭದ್ರತಾಧಿಕಾರಿಗಳು, ಸಿಸಿಬಿ ಪೊಲೀಸರು ಜಂಟಿಯಾಗಿ ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT