ಎಸ್. ಆರ್ ಹೀರೆಮಠ್ 
ಜಿಲ್ಲಾ ಸುದ್ದಿ

ದೆಹಲಿಯಲ್ಲಿ ಮೊಬೈಲ್ ಕಳೆದುಕೊಂಡ ಹಿರೇಮಠ್

ಬಿಗಿ ಭದ್ರತೆ ಇರುವ ಪ್ರದೇಶದಲ್ಲಿ ಬೈಕ್‍ನಲ್ಲಿ ಬಂದ ಕಳ್ಳರು ದುಬಾರಿ ಮೊಬೈಲ್‍ಅನ್ನು ಕಿತ್ತೊಯ್ದಿದ್ದಾರೆ. ಮೊಬೈಲ್ ಕಳೆದುಕೊಂಡವರು ಸಮಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು...

ಪೊಲೀಸ್‍ಠಾಣೆ ಸಮೀಪವೇ ಬೈಕ್‍ನಲ್ಲಿ ಬಂದ ಕಳ್ಳರು ಮಹಿಳೆಯರಿಂದ ಚಿನ್ನದ ಸರ ಕದ್ದೊಯ್ಯುವ ಸುದ್ದಿ ಬೆಂಗಳೂರಿನಲ್ಲಿ ಹೊಸದೇನಲ್ಲ. ಆದರೆ, ದೆಹಲಿಯಲ್ಲಿ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲಿರುವ ,ಬಿಗಿ ಭದ್ರತೆ ಇರುವ ಪ್ರದೇಶದಲ್ಲಿ ಬೈಕ್‍ನಲ್ಲಿ ಬಂದ ಕಳ್ಳರು ದುಬಾರಿ ಮೊಬೈಲ್‍ಅನ್ನು ಕಿತ್ತೊಯ್ದಿದ್ದಾರೆ. ಮೊಬೈಲ್ ಕಳೆದುಕೊಂಡವರು ಸಮಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು.

ದೀನದಯಾಳ್ ಉಪಾಯಧ್ಯಾಯ ಮಾರ್ಗದಲ್ಲಿರುವ ಗಾಂಧಿ ಭವನದಲ್ಲಿ ವಾಯುವಿಹಾರ ಮಾಡುತ್ತಿದ್ದ ಹಿರೇಮಠ ಅವರಿಂದ ಮೊಬೈಲ್ ಕಿತ್ತೊಯ್ಯಲಾಗಿದೆ. ಆದಾಯ ತೆರಿಗ ಕಚೇರಿ, ಪೊಲೀಸ್ ಕೇಂದ್ರ ಕಚೇರಿ ಸೇರಿದಂತೆ ಹತ್ತಾರು ಕೇಂದ್ರ ಸರ್ಕಾರದ ಕಚೇರಿಗಳು ಈ ವ್ಯಾಪ್ತಿಯಲ್ಲಿರುವುದರಿಂದ ಬಿಗಿ ಭದ್ರತೆ ಇದೆ. ಜತೆಗೆ ಎಲ್ಲೆಡೆ ಸಿಸಿ ಕ್ಯಾಮರಾದ ಕಣ್ಗಾವಲು ಇದೆ. ಐಟಿಒ ಮೆಟ್ರೋ ನಿಲ್ದಾಣವೂ ಗಾಂಧಿ ಭವನಕ್ಕೆ ಸಮೀಪವೇ ಇದೆ. ಹಿರೇಮಠ ಅವರ ಮೊಬೈಲ್‍ಗೆ ಬಂದ ಕರೆ ಸ್ವೀಕರಿಸುವಷ್ಟರಲ್ಲೇ  ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದ ಹಿರೇಮಠ ಅವರಿಗೆ ಬೈಕ್ ನಂಬರ್ ಸಹ ನೋಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಇಂದ್ರಪ್ರಸ್ತ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿ ಟೀವಿ ಪರಿಶೀಲಿಸಿ ಕಳ್ಳರನ್ನು ಹಿಡಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT