ಜಿಲ್ಲಾ ಸುದ್ದಿ

ಕವಿಮನೆಯಲ್ಲಿ ಕಳವು; ವ್ಯಕ್ತಿ ವಶ

Rashmi Kasaragodu
ಶಿವಮೊಗ್ಗ:  ಕುಪ್ಪಳಿಯ ಕವಿಮನೆಯಲ್ಲಿ ಕುವೆಂಪು ಅವರ ಪದ್ಮ ಪ್ರಶಸ್ತ ಪದಕಗಳನ್ನು  ಕಳವು ಮಾಡಿದ್ದ ಅನುಮಾನದ ಮೇಲೆ ಪೊಲೀಸರು ದಾವಣಗೆರೆ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ದಾವಣಗೆರೆ ಸಮೀಪದ ಆನ ಗೋಡಿನ  ಕಾಯಕದ ರೇವಣ್ಣ ಆಲಿಯಾಸ್  ರೇವಣಸಿದ್ದಪ್ಪ ಎಂಬಾತ ನನ್ನು ವಶಕ್ಕೆ ಪಡೆದಿದ್ದಾರೆ. ಈತನ
ವಿರುದ್ಧ ನ್ಯಾಮತಿ, ರಿಪ್ಪನ್  ಪೇಟೆ,  ದಾವಣಗೆರೆ  ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈತ ಪದೇ ಪದೆ ಹಲವೆಡೆ ಕಳವು ಮಾ ಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಅಜ್ಞಾತ ಸ್ಥಳದಲ್ಲಿ ಈತನ ವಿಚಾರಣೆ ನಡೆಯುತ್ತಿದೆ. ಘಟನೆ ಸೋಮವಾರ ತಡರಾತ್ರಿ ಕುಪ್ಪಳಿಯ  ಕವಿ ಮನೆಯಲ್ಲಿ ನಡೆದಿತ್ತು. ಇಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕುವೆಂಪು  ಅವರಿಗೆ ಭಾರತ ಸರ್ಕಾರ  ಪ್ರದಾನ ಮಾಡಿದ್ದ ಪದ್ಮಭೂಷಣ, ಪದ್ಮ ವಿಭೂಷಣ  ಹಾಗೂ ವಿಶ್ವವಿದ್ಯಾಲಯ ನೀಡಿದ್ದ ಎರಡು ಪದಕಗಳನ್ನು ಅಪಹರಿಸಲಾಗಿತ್ತು.ಕವಿಮನೆಯೊಳಗೆ ಚಾವಣಿ ಮೂಲಕ ಅಕ್ರಮ ಪ್ರವೇಶ ಮಾಡಿದ್ದ ದುಷ್ಕರ್ಮಿ ಪದಕಗಳನ್ನು ಪ್ರದರ್ಶ ನಕ್ಕೆ ಇಡಲಾಗಿದ್ದ ಕಪಾಟಿನ ಗಾಜು ಗಳನ್ನು ಒಡೆದು ಅಪಹರಿಸಿದ್ದ. ಅಲ್ಲದೇ ಸಿಸಿ ಕ್ಯಾಮೆರಾಗಳನ್ನು ಧ್ವಂಸ ಮಾಡಿದ್ದ ಸಿಸಿ ಕ್ಯಾಮೆರಾ ದಲ್ಲಿ ದಾಖಲಾದ ಮುಖಚರ್ಯೆಯು ಪೊಲೀಸ ರಿಗೆ ಸಿಕ್ಕ ಮುಖ್ಯ ಸುಳಿವಾ ಗಿದ್ದು. ಈ ಜಾಡಿನಲ್ಲಿ ಸಾಗಿದ ಪೊಲೀಸರು ರೇವಣ್ಣ ಎಂಬಾತನನ್ನು ವಶಕ್ಕೆ  ಪಡೆದಿದ್ದಾರೆ. ಎಸ್ ಪಿ ರವಿ ಡಿ. ಚೆನ್ನಣ್ಣವರ್ ಅವರು ಕಳವಿಗೆ ಸಂಬಂಧಪಟ್ಟಂತೆ ತನಿಖೆಗೆ ಅಪರ ಜಿಲ್ಲಾ ರಕ್ಷಣಾಧಿಕಾರಿ ವಿಷ್ಣು ವರ್ಧನ್ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ನಾಲ್ವರು ವೃತ್ತ ನಿರೀಕ್ಷಕರ ತಂಡ ರಚಿಸಿದ್ದರು.
ಕಳ್ಳತನವೇ ಕಾಯಕ: ರೇವಣ್ಣನ ವಿರುದ್ಧ  ದಾವಣಗೆರೆ ಮತ್ತಿತರ  ಜಿಲ್ಲೆಗಳಲ್ಲಿ ಮನೆ, ದೇವಸ್ಥಾನ ಸೇರಿದಂತೆ ವಿವಿಧೆಡೆ ಕಳ್ಳತನ ನಡೆಸಿದ ಪ್ರಕರಣಗಳಿವೆ.
SCROLL FOR NEXT