(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ವೃದ್ಧ ದಂಪತಿ ದರೋಡೆ: ಆರೋಪಿ ಸೆರೆ

ಕೆಲಸ ಮಾಡುತ್ತಿದ್ದ ಮನೆಯಲ್ಲೇ ವೃದ್ಧ ದಂಪತಿಯ ಕೈ ಕಾಲು ಕಟ್ಟಿ ಹಾಕಿ ಆಭರಣ ದೋಚಿ ಪರಾರಿಯಾಗಿದ್ದ ಅಡುಗೆ ಕೆಲಸದ ಆನಂದ್ ಬೆಹ್ರಾ ಎಂಬಾತನನ್ನು (27) ವಿದ್ಯಾರಣ್ಯಪುರ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ...

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ವೃದ್ಧ ದಂಪತಿಯ ಕೈ ಕಾಲು ಕಟ್ಟಿ ಹಾಕಿ ಆಭರಣ ದೋಚಿ ಪರಾರಿಯಾಗಿದ್ದ ಅಡುಗೆ ಕೆಲಸದ ಆನಂದ್ ಬೆಹ್ರಾ ಎಂಬಾತನನ್ನು (27) ವಿದ್ಯಾರಣ್ಯಪುರ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ.

ಎಚ್‍ಎಂಟಿ ಲೇಔಟ್‍ನ ಶ್ರೀನಿವಾಸ್ (75) ಹಾಗೂ ಜಯಲಕ್ಷ್ಮಿ (62) ದಂಪತಿ ಮನೆಯಲ್ಲಿ ಬಾಣಸಿಗನಾಗಿ ಆನಂದ ಕೆಲಸ ಮಾಡುತ್ತಿದ್ದ. ನ.4ರಂದು ಭುವನೇಶ್ವರದ ಸ್ನೇಹಿತ ಜಗನ್ ಜತೆ ಸೇರಿಕೊಂಡು ದರೋಡೆ ಮಾಡಿದ್ದ. ತಲೆಮರೆಸಿಕೊಂಡಿರುವ ಜಗನ್‍ಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನ.4ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಜಗನ್‍ಗೆ ಕರೆ ಮಾಡಿದ್ದ ಆನಂದ್, ದರೋಡೆ ಸಂಚಿನ ಬಗ್ಗೆ ವಿವರಿಸಿ ಮನೆಗೆ ಕರೆಸಿಕೊಂಡಿದ್ದ. ಇಬ್ಬರು ಸೇರಿ ವೃದ್ಧ ದಂಪತಿ ಮಲಗಿದ್ದ ಕೋಣೆಗೆ ತೆರಳಿ ಬೆಡ್‍ಶೀಟ್‍ಗಳಿಂದ ಅವರ ಕೈ-ಕಾಲುಗಳನ್ನು ಕಟ್ಟಿ ಹಾಕಿ ತಲೆದಿಂಬುಗಳಿಂದ ವೃದ್ಧ ದಂಪತಿಯ ಉಸಿರುಗಟ್ಟಿಸಿದ್ದರು.

ಆಗ ಅವರು ಸತ್ತಂತೆ ನಟಿಸಿ ಜೀವ ಉಳಿಸಿಕೊಂಡಿದ್ದರು. ಇಬ್ಬರು ಮೃತಪಟ್ಟಿರಬಹುದೆಂದು ಭಾವಿಸಿದ ಆರೋಪಿಗಳು, ಮನೆಯೆಲ್ಲ ಹುಡುಕಾಡಿ ಆಭರಣ ಸಿಗದಿದ್ದಾಗ ಜಯಲಕ್ಷ್ಮಿ ಧರಿಸಿದ್ದ 70 ಗ್ರಾಂನ ಚಿನ್ನದ ಸರ ಹಾಗೂ ಎರಡು ಉಂಗುರುಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಆನಂದ್ ಬಳಸುತ್ತಿದ್ದ ಮೊಬೈಲ್ ಫೋನ್ ಸಿಡಿಆರ್ ಪರಿಶೀಲಿಸಿದಾಗ ಆತ ಒಡಿಶಾದ ಬನಾಸಿಯಾ ಗ್ರಾಮದಲ್ಲಿರುವುದು ಗೊತ್ತಾಯಿತು. ಅಲ್ಲಿಗೆ ತೆರಳಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ