ಬಿಬಿಎಂಪಿ 
ಜಿಲ್ಲಾ ಸುದ್ದಿ

ಸ್ವಚ್ಛ ಭಾರತ್ ಸಮಿತಿಗೆ ಮೇಯರ್ ಅಸಮಾಧಾನ

ಸ್ವಚ್ಛ ಭಾರತ್ ಮಿಷನ್ ಮೇಲ್ವಿಚಾರಣೆ ಸಮಿತಿಗೆ ಬಿಬಿಎಂಪಿ ಪ್ರತಿನಿಧಿಗಳನ್ನು ಸೇರಿಸದ ನಗರಾಭಿವೃದ್ಧಿ ಇಲಾಖೆ ಯ ಕ್ರಮವೀಗ ಬಿಬಿಎಂಪಿ ಮೇಯರ್...

ಬೆಂಗಳೂರು:  ಸ್ವಚ್ಛ ಭಾರತ್ ಮಿಷನ್ ಮೇಲ್ವಿಚಾರಣೆ ಸಮಿತಿಗೆ ಬಿಬಿಎಂಪಿ ಪ್ರತಿನಿಧಿಗಳನ್ನು ಸೇರಿಸದ ನಗರಾಭಿವೃದ್ಧಿ ಇಲಾಖೆ ಯ ಕ್ರಮವೀಗ  ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರ ನಡುವಿನ ಅಸಮಾಧಾಕ್ಕೆ ಕಾರಣವಾಗಿದೆ.ಸಮಿತಿಗೆ ಸಂಸದರು, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರನ್ನು ಮಾತ್ರ ನೇಮಿಸಿರುವು ದಕ್ಕೆ ಸದಸ್ಯರು ಹಾಗೂ ಮೇಯರ್  ಮಂಜುನಾಥ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಬಿಬಿಎಂಪಿ ಕಾರ್ಯಕ್ರಮಗಳಿಗೆ ಸದಸ್ಯರನ್ನು ಸೇರಿಸದಿರುವುದು ಸರಿಯಲ್ಲ ಎಂದು ಮಂಜುನಾಥ ರೆಡ್ಡಿ ಆಯುಕ್ತ ಕುಮಾರ್ ನಾಯಕ್ ಅವರಿಗೆ ಪತ್ರ ಬರೆದಿದ್ದಾರೆ. 
ಸಮಿತಿಗೆ ಆಯ್ಕೆಮಾಡುವ ಪ್ರಕ್ರಿಯೆಯನ್ನು  ಪುನರಾವಲೋಕಿಸಬೇಕು ಎಂದೂ ಪತ್ರದಲ್ಲಿ ಒತ್ತಾಯಿಸಿದ್ದಾರೆ. ನ.11 ರಂದು ನಗರಾಭಿವೃದ್ಧಿ ಇಲಾಖೆ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ
ನೇತೃತ್ವದಲ್ಲಿ ಪುನರಾವಲೋಕನ ಹಾಗೂ ಮೇಲ್ವಿಚಾರಣೆ ಸಮಿತಿ ರಚಿಸಿದೆ. ಇದರಲ್ಲಿ ಮೇಯರ್ ,ಉಪಮೇಯರ್ ಸೇರಿದಂತೆ ಯಾವುದೇ ಬಿಬಿಎಂಪಿ ಸದಸ್ಯರ ಹೆಸರು
ಸೇರ್ಪಡೆಯಾಗಿಲ್ಲ. ಹೀಗಾಗಿ ಸಮಿತಿಗೆ ಸದಸ್ಯರನ್ನು ಸೇರ್ಪಡೆಗೊಳಿಸುವ ವಿ ಚಾರವನ್ನು ಮತ್ತೊಮ್ಮೆ ಅವಲೋಕಿಸಬೇಕು ಎಂದು ಮೇಯರ್ ಮಂಜುನಾಥ ರೆಡ್ಡಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕಳೆದ ಬಾರಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ನೀಡಿದ ರ್ಯಾಂಕಿಂಗ್‍ನಲ್ಲಿ ಬೆಂಗಳೂರು ಸ್ವಚ್ಛವಾದ ಮೊದಲ ರಾಜಧಾನಿ ಎಂದು ಹೆಸರು ಪಡೆದಿತ್ತು. ಅದರೀಗ ಯೋಜನೆ ಸಮಿತಿ  ರಚನೆಯ ಹಂತದಲ್ಲಿ ಸರ್ಕಾರದ ನಡೆ, ಬಿಬಿಎಂಪಿ ಸದಸ್ಯರಲ್ಲಿ ಅಸಮಾಧಾನ ಸೃಷ್ಟಿಸಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್  ಯೋಜನೆಯಡಿ `ಪುನರಾವಲೋಕನ ಹಾಗೂ ಮೇಲ್ವಿಚಾರಣೆ ಸಮಿತಿ'ಗೆ ಕೇಂದ್ರ  ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಅಧ್ಯಕ್ಷರನ್ನಾಗಿ ಆರಿಸಲಾಗಿದೆ. ಸಚಿವ ಅನಂತಕುಮಾರ್, ಸಂಸದರಾದ ಪಿ.ಸಿ. ಮೋಹನ್, ಡಾ. ಎಂ. ವೀರಪ್ಪ ಮೊಯ್ಲಿ  ಹಾಗೂ ಡಿ.ಕೆ.ಸುರೇಶ್ ಅವರನ್ನು ಸಹಅಧ್ಯಕ್ಷರಾಗಿ ನೇಮಿಸಲಾಗಿದೆ. ಬೆಂಗಳೂರು  ನಗರ ಜಿಲ್ಲೆ    ವ್ಯಾಪ್ತಿಯ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಸ್ವಚ್ಛ ಭಾರತ್  ಮಿಷನ್ ಗೆ ಮೇಯರ್, ಉಪಮೇಯರ್ ಹಾಗೂ  ಆಯಾ ವಾರ್ಡ್‍ಗಳ ಸದಸ್ಯರನ್ನು ನೇಮಿಸಿಲ್ಲ. ಇದರಿಂದ ಸಮನ್ವಯತೆ ಕೊರತೆ   ಉಂಟಾಗಲಿದೆ. ಹೀಗಾಗಿ ತೀರ್ಮಾನವನ್ನು  ಪುನರಾವಲೋಕಿಸಬೇಕು ಎಂದು ಮೇಯರ್ ಮಂಜುನಾಥ ರೆಡ್ಡಿ ನ. 19 ರಂದು ಬರೆದ  ಪತ್ರದಲ್ಲಿ ಆಗ್ರಹಿಸಿದ್ದಾರೆ. `ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅವಲೋಕನೆಗಾಗಿ ಸಮಿತಿ ರಚಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ಬಿಬಿಎಂಪಿ ವ್ಯಾಪ್ತಿಯ ಯಾವುದೇ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸವು ಅಥವಾ ನಿರ್ಧಾರ ಕೈಗೊಳ್ಳಲು ಸದಸ್ಯರ ಸಹಕಾರ ಬೇಕಿದೆ. ಸ್ವಚ್ಛ ಭಾರತ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮೇಯರ್, ಉಪ ಮೇಯರ್  ಹಾಗೂ ಸ್ಥಳೀಯ ಸದಸ್ಯರ ಸಹಕಾರ, ಸಲಹೆ ಹಾಗೂ ಉಪಸ್ಥಿತಿ ಅವಶ್ಯಕವಾಗಿದೆ. ಇಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಬಿಎಂಪಿ ಪ್ರತಿನಿಧಿಗಳನ್ನು ತೊಡಗಿಸದಿರುವುದು ಅಪರಾಧವಾಗಿದೆ. ಹೀಗಾಗಿ ಈ ಕ್ರಮವನ್ನು ಪುನರವಲೋಕಿಸಬೇಕು ಎಂದು ಮೇಯರ್ ಆಯುಕ್ತರನ್ನು ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT