ಬೆಂಗಳೂರು: ಬಿಲ್ಲವ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ನೀಡಿ ಚರ್ಚೆ ನಡೆಸುತ್ತೇವೆ. ಬಿಲ್ಲವ ವಿದ್ಯಾರ್ಥಿ ನಿಲಯದ ಹಾಗೆಯೇ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸಲು ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಭರವಸೆ ನೀಡಿದ್ದಾರೆ.
ಬಿಲ್ಲವ ಅಸೋಸಿಯೇಷನ್ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತನ್ನ 39ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇರೆ ಬೇರೆ ಊರುಗಳಿಂದ ಬರುವ ಹೆಣ್ಣುಮಕ್ಕಳಿಗೆ
ನೆರವಾಗುವುದು ಒಳ್ಳೆಯ ಆಲೋಚನೆ. ನಿಲಯಕ್ಕೆ ಸೂಕ್ತವಾದ ಜಾಗವನ್ನು ಅದರಲ್ಲೂ ಅಸೋಸಿಯೇಷನ್‍ಗೆ ಹತ್ತಿರವಿರುವ ಜಾಗವಾದರೆ ಒಳಿತು ಎಂದು ಸಲಹೆ ನೀಡಿದರು. ಪೂರ್ವಜರು ಮಾಡಿದ ಪಾಪಪುಣ್ಯಗಳು ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ. ಹಾಗೆಯೇ ನಮ್ಮ ಮಕ್ಕಳಿಗೆ ಒಳ್ಳೆಯದಾಗಬೇಕಾದರೆ ನಾವೂ ಉತ್ತಮ ರೀತಿಯಲ್ಲಿ ಬದುಕಿ ಮಾದರಿಯಾಗಬೇಕು ಎಂದು ಹೇಳಿದ್ದಾರೆ.
ಬಿಬಿಎಂಪಿ ಸದಸ್ಯೆ ಸುಜಾತ ರಮೇಶ್ ಉದ್ಯಮಿಗಳಾದ ಗಿರೀಶ್ ಪೂಜಾರಿ, ದಿನೇಶ್ ಬಂಗೇರ, ಎನ್. ಶ್ರೀಧರ್ ಅವರನ್ನು ಸನ್ಮಾನಿ ಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ-ಗಳು ನಡೆದವು. ಬಿಲ್ಲವ ಅಸೋಸಿಯೇಷನ್‍ನ ಉಪಾಧ್ಯಕ್ಷ ಭಾಸ್ಕರ್ ಸಿ.ಅಮೀನ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಕಾರ್ಯದರ್ಶಿ ರಾಜೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಬಿ.ಎಂ. ಉದಯಕುಮಾರ್ ಹಾಜರಿದ್ದರು.