ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಕಬ್ಬನ್ ಪಾರ್ಕ್ ಕೆಜಿಎಸ್ ಕ್ಲಬ್‍ನಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು 
ಜಿಲ್ಲಾ ಸುದ್ದಿ

ವಂಚಿತ ಸಮುದಾಯಗಳ ಸಂಘಟನೆ ಅನಿವಾರ್ಯ

ದುರ್ಬಲ ಸಮುದಾಯಗಳು ಆಡಳಿತದ ಚುಕ್ಕಾಣಿ ಹಿಡಿದಾಗ ಬಲಿಷ್ಠ ಸಮುದಾಯಗಳು ಸಹಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ `ಜಾತಿ ರಾಜಕಾರಣ' ಆರಂಭವಾಗುತ್ತದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು...

ಬೆಂಗಳೂರು: ದುರ್ಬಲ ಸಮುದಾಯಗಳು ಆಡಳಿತದ ಚುಕ್ಕಾಣಿ ಹಿಡಿದಾಗ ಬಲಿಷ್ಠ ಸಮುದಾಯಗಳು ಸಹಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ `ಜಾತಿ ರಾಜಕಾರಣ' ಆರಂಭವಾಗುತ್ತದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಕಬ್ಬನ್ ಪಾರ್ಕ್ ಕೆಜಿಎಸ್ ಕ್ಲಬ್‍ನಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಅವರು
ಮಾತನಾಡಿದರು. ಆಡಳಿತ ವ್ಯವಸ್ಥೆ ದುರ್ಬಲರ ಕೈಗೆ ಬಂದಾಗ ಬಲಿಷ್ಠರು ಸಹಿಸುವುದಿಲ್ಲ. ನಮ್ಮ ರಾಜ್ಯದ ರಾಜಕಾರಣ ಸಹ ಇದರಿಂದ ಹೊರತಾಗಿಲ್ಲ. ಡಿ.ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಅಧಿಕಾರದಲ್ಲಿದ್ದಾಗಲೂ ಜಾತಿ ರಾಜಕೀಯ ಕೆಲಸ ಮಾಡಿತು. ಬಲಿಷ್ಠರನ್ನು ಎದುರಿಸಬೇಕಾದರೆ ವಂಚಿತ ಸಮುದಾಯದ ಜನಪತ್ರಿನಿಧಿಗಳು
ಒಗ್ಗೂಡುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಸಂಘಟನೆಗಳು ಇರಬಾರದು. ಆದರೆ, ಬಲಿಷ್ಠ ಸಮುದಾಯಗಳ ರಾಜಕೀಯ ಹಿತಾಸಕ್ತಿ ಎದುರು ತಮ್ಮ ಅಸ್ಥಿತ್ವ ಕಾಪಾಡಿಕೊಳ್ಳಲು ದುರ್ಬಲ ಅಥವಾ ವಂಚಿತ ಸಮುದಾಯಗಳ ಸಂಘಟನೆ ಅತ್ಯಗತ್ಯ. ಈ ದೇಶದಲ್ಲಿ ಹಿಂಸೆಯಿಂದ ಅಹಿಂಸೆಯತ್ತ ತಿರುಗಿದವರಲ್ಲಿ ಸಾಮಾ್ರಟ ಅಶೋಕ ಮತ್ತು ಕನಕದಾಸರು ಪ್ರಮುಖರಾಗಿ ಕಾಣುತ್ತಾರೆ. ಕಳಿಂಗ ಯುದ್ಧದಿಂದ ಮನನೊಂದ ಅಶೋಕ ಬೌದ್ಧ ಧರ್ಮ ಸ್ವೀಕರಿಸಿ ಜಗತ್ತಿನಾದ್ಯಂತ ಪ್ರಚಾರ ಮಾಡಿದ. ಅಂತೆಯೇ ರಾಜ್ಯದಲ್ಲಿ ಕನಕದಾಸರು ಭಕ್ತಿಯತ್ತ ವಾಲಿ ಸಾಮಾಜಿಕ ಅನಿಷ್ಠ ಪದ್ಧತಿಗಳ ನಿವಾರಣೆಗೆ ಹೋರಾಡಿದರು. ಅವರ ರಾಮಧ್ಯಾನ್ಯ ಚರಿತೆ ಜಾಗತಿಕ ಸಾಹಿತ್ಯದಲ್ಲಿ ಅದ್ಬುತ ರೂಪಕ ಕಾವ್ಯ ಎಂದು ಬಣ್ಣಿಸಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅವರ ನಳಚರಿತ್ರೆ ಸ್ತ್ರೀ ಲೋಕದ ಒಳ ತುಮುಲಗಳ ತೆರೆದಿಟ್ಟಿದೆ. ಈ ಕಾರಣಕ್ಕಾಗಿಯೇ ಅವರ ಕೃತಿಗಳು ಇಂದಿಗೂ ಸಾಂಸ್ಕೃತಿಕ ಲೋಕದಲ್ಲಿ ಚರ್ಚೆಯಾಗುತ್ತಿವೆ. ಹೀಗಾಗಿ ಕನಕದಾಸರು ಬುದ್ಧ, ಬಸವಣ್ಣನಂತೆ ವಿಶ್ವ ಮಾನವರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ ಹೊಸದುರ್ಗಾ ಶಾಖಾ ಮಠದಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ  ವಹಿಸಿದ್ದರು. ಜಲಸಂಪನ್ಮೂಲ ಇಲಾಖೆ ಉಪ ಕಾರ್ಯದರ್ಶಿ ಎಸ್.ರೇಣುಕಾರಾದ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಅಧ್ಯಕ್ಷ ಎಚ್. ಗೋಪಾಲಕೃಷ್ಣಸ್ವಾಮಿ, ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಾಧಕರಾದ ನಾಗಣ್ಣ, ಮುತ್ತಣ್ಣ ಪೂಜಾರ, ಎಚ್.ಎಸ್.ಪಾಟೀಲ, ಕೆಂಚಮಾದೇಗೌಡ, ಡಾ.ಆರ್.ಹರ್ಷ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT