ಜಿಲ್ಲಾ ಸುದ್ದಿ

ಗಾಂಧಿ ವಿಚಾರಗಳೇ ಸರ್ಕಾರದ ಸೂತ್ರಗಳು: ಸಿಎಂ

Mainashree

ಬೆಂಗಳೂರು: ಭಾರತೀಯ ಸಮಾಜದ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅರಿತಿದ್ದ ಗಾಂಧೀಜಿ ವಿಚಾರದಾರೆಗಳು ನಮ್ಮ ಸರ್ಕಾರಕ್ಕೆ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ಶುಕ್ರವಾರ ಬೆಳಗ್ಗೆ 7.15ಕ್ಕೆ ಅಕಾಶವಾಣಿ, ಬೆಳಗ್ಗೆ 8.30ಕ್ಕೆ ದೂರದರ್ಶನದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಿ ಅವರ ಚಿಂತನೆಯ ಬೆಳಕಲ್ಲಿಯೇ ಭಾರತ ನಿರ್ಮಾಣವಾಗಿದೆ.

ಅಸ್ಪೃಶ್ಯತೆ ನಿವಾರಣೆ, ರೈತರ ಏಳಿಗೆ, ಖಾದಿ ಮತ್ತು ಗ್ರಾಮೋದ್ಯೋಗ, ಕಾರ್ಮಿಕರ ಕಲ್ಯಾಣ, ಮಹಿಳೆರ ರಕ್ಷಣೆ , ಶಿಕ್ಷಣ, ಗ್ರಾಮಸ್ವಚ್ಛತೆ, ಆರ್ಥಿಕ ಸಮಾನತೆ, ಸಮುದಾಯದ ಐಕ್ಯತೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣ ಅವರ ರಚನಾತ್ಮಕ ಕಾರ್ಯಕ್ರಮಗಳು.

ಗಾಂಧೀಜಿ ಕನಸಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಮಗ್ರವಾಗಿ ಮತ್ತು ಸಮರ್ಥವಾಗಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದರು. ಗ್ರಾಮಮಟ್ಟದ ಆಡಳಿತ ಸಂಸ್ಥೆಗಳು ಸ್ವಾವಲಂಬಿ ಘಟಕಗಳಾಗುವಂತೆ ಮಾಡಬೇಕು ಎಂದು ಗಾಂಧಿ ಕನಸು ಕಂಡಿದ್ದರು.

ಅವರ ಕನಸು ನನಸು ಮಾಡಲು ಬದ್ಧರಾಗಿದ್ದೇವೆ. ಗ್ರಾಮಗಳ ವಿಕಾಸಕ್ಕಾಗಿ 21 ಅಂಶಗಳ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಗ್ರಾಮ ನೈರ್ಮಲ್ಯದ ವಿಷಯದಲ್ಲಿ ರಾಜ್ಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಶೌಚಾಲಯ ನಿರ್ಮಾಣದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಎಂದರು.

SCROLL FOR NEXT