ಕೆ.ಜೆ ಜಾರ್ಜ್ 
ಜಿಲ್ಲಾ ಸುದ್ದಿ

ಹೀರೆಮಠ್ ರಾಜ್ಯಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ...!

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ಅವರು ನಮ್ಮ ರಾಜ್ಯದ ರಾಜ್ಯಪಾಲರಲ್ಲ ಅಥವಾ ರಾಷ್ಟ್ರಪತಿಗಳೂ ಅಲ್ಲ. ...

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ್ ಅವರು ನಮ್ಮ ರಾಜ್ಯದ ರಾಜ್ಯಪಾಲರಲ್ಲ ಅಥವಾ ರಾಷ್ಟ್ರಪತಿಗಳೂ ಅಲ್ಲ. ಹೀಗಿರುವಾಗ ನಾನು ಅವರ ಪ್ರಶ್ನೆಗಳಿಗೆ ಏಕೆ ಉತ್ತರಿಸಬೇಕು ಎಂದು ಗೃಹ ಸಚಿವ ಜಾರ್ಜ್ ಕಿಡಿ ಕಾರಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ನಾಯಕರೂ ಕಳಂಕಿತರಾಗಿದ್ದು, ಐವರು ಸಚಿವರನ್ನು ಮನೆಗೆ ಕಳುಹಿಸಿ ಎಂದು ನಿಮ್ಮ ಹೆಸರನ್ನೂ ಕೂಡ ಹಿರೇಮಠ್ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರೇಮಠ್ ರಾಜ್ಯದ 6.5 ಕೋಟಿ ಜನರಂತೆ ಓರ್ವ ಸಾಮಾನ್ಯ ವ್ಯಕ್ತಿ ಅಷ್ಟೇ. ಅವರು ರಾಜ್ಯಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ. ಅಲ್ಲದೆ ನನ್ನ ವಿರುದ್ಧ ಹೇಳಿಕೆ ನೀಡದಂತೆ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಹೀಗಿರುವಾಗ ಅವರು ಕೋರ್ಟ್ ಆದೇಶವನ್ನೂ ಪಾಲಿಸದೇ ನನ್ನ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಂಡಾಮಂಡಲವಾದರು.

ರಾಜ್ಯ ಸರ್ಕಾರದ ಸಂಪುಟದಲ್ಲಿರುವ ಐವರು ಸಚಿವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರೇ ನಿಮಗೆ ಧೈರ್ಯವಿದ್ದಲ್ಲಿ ಅವರನ್ನು ಕೂಡಲೇ ಮನೆಗೆಕಳುಹಿಸಿ, ಸಂತೋಷ್ ಲಾಡ್ ಇಲಿಯಾದರೆ ಇವರೆಲ್ಲರೂ ಹೆಗ್ಗಣಗಳು ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT