ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಈಗ ಹೋರಾಟ ರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಜಲ ಯೋಧ ರಾಜೇಂದ್ರ ಸಿಂಗ್ ಅ. 13ರಂದು ಧಾರವಾಡಕ್ಕೆ ಆಗಮಿಸಿ, ಹೋರಾಟ ಬೆಂಬಲಿಸಲಿದ್ದಾರೆ. ರಾಜೇಂದ್ರ ಸಿಂಗ್ ಅ. 13ರಂದು ಬೆಳಗ್ಗೆ 9ಕ್ಕೆ ಮಲಪ್ರಭಾ ಹಾಗೂ ಮಹದಾಯಿ ಉಗಮ ಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ಧಾರವಾಡ, ನವಲಗುಂದ ಹಾಗೂ ನರಗುಂದದಲ್ಲಿ ರೈತರೊಂದಿಗೆ ಚಿಂತನಾ ಸಭೆ ನಡೆಸಲಿ ದ್ದಾರೆ. ಮಹದಾಯಿ ನದಿ ತಿರುವು ಯೋಜನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಮುಂದಿನ ಹೋರಾಟದ ರೂಪರೇಷೆ ನಿರ್ಧರಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಅ. 7ರಂದು ಧಾರವಾಡ ದ ವಿದ್ಯಾವರ್ಧಕ ಸಂಘದಲ್ಲಿ ಕನ್ನಡಪರ ಹೋರಾಟಗಾರರು, ಮಠಾಧೀಶರು ಹಾಗೂ ರೈತ ಮುಖಂಡರ ಸಭೆ ನಡೆಯಲಿದೆ ಎಂದು ಎಂದು ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಿಎಂ ಸಿದ್ದರಾಮಯ್ಯ ನವರು ಗೋವಾ, ಮಹಾರಾಷ್ಟ್ರದ ಮುಖ್ಯ ಮಂತ್ರಿಗಳನ್ನು ಸರ್ವಪಕ್ಷ ನಿಯೋಗ ದೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಬೇಕೆಂದು ಎಂದು ಸ್ವಾಮೀಜಿ
ಮುಂದುವರಿದ ಹೋರಾಟ: ಗದಗ ಜಿಲ್ಲೆಯ ನರಗುಂದದಲ್ಲಿ 82 ದಿನಗಳಿಂದ ನಡೆಯುತ್ತಿರುವ ಮಹದಾಯಿ, ಕಳಸಾ-ಬಂಡೂರಿ ಹೋರಾಟಕ್ಕೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರತಿಭಟನೆ, ಪಾದಯಾತ್ರೆ, ಬಂದ್, ಚಳವಳಿ, ಚಕ್ಕಡಿ ಯಾತ್ರೆ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗದಗನಲ್ಲಿ ಕರ್ನಾಟಕ ನವನಿರ್ಮಾಣ ವೇದಿಕೆಯ ಕಾರ್ಯಕರ್ತರು ಹಾಗೂ ರೈತರು ಚಕ್ಕಡಿ ಚಳವಳಿ ನಡೆಸಿದರು. ಡಂಬಳ ಗ್ರಾಮದಲ್ಲಿನ ರೈತರು ಹಾಗೂ ಹೋರಾಟಗಾರರು ಡಂಬಳ ಗ್ರಾಮವ ನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಕಳಸಾ-ಬಂಡೂರಿ, ಮಹದಾಯಿಗೆ ಬೆಂಬಲಿಸಿದರು. ಲಕ್ಷ್ಮೇಶ್ವರದ ನೂರಾರು ರೈತರು ಹಾಗೂ ಪ್ರಗತಿಪರ ಚಿಂತಕರು ಲಕ್ಷ್ಮೇಶ್ವರದಿಂದ ನರಗುಂದಕ್ಕೆ ತೆರಳಿ ಹೋರಾಟಕ್ಕೆ ಬೆಂಬಲಿಸಿದರು. ರೋಣ ತಾಲೂಕಿನ ಜಕ್ಕಲಿ ಗ್ರಾಮದ
ನೂರಾರು ರೈತರು ಜಕ್ಕಲಿಯಿಂದ ನರಗುಂದದವರೆಗೆ ಸುಮಾರು 51 ಕಿ.ಮೀ ಪಾದಯಾತ್ರೆ ನಡೆಸಿ ಹೋರಾಟಗಾರರಿಗೆಬೆಂಬಲ ವ್ಯಕ್ತಪಡಿಸಿದರು.
ಖೇಣಿ ಯಾತ್ರೆ: ಹುಬ್ಬಳ್ಳಿಯಲ್ಲಿ ಶಾಸಕ ಅಶೋಕ್ ಖೇಣಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ತಮ್ಮ 66ನೇ ಜನ್ಮದಿನ ಆಚರಿಸಿಕೊಂಡ ಖೇಣಿ, ಮಹದಾಯಿ ಕುರಿತಾಗಿ ರಾಜ-ಕಾರಣಿಗಳ ಬಣ್ಣ
ಬಯಲು ಮಾಡಲು ರಾಜ್ಯಾದ್ಯಂತ ವಿಡಿಯೋ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದರು. ನರಗುಂದದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ,ನಟ ಮುಖ್ಯಮಂತ್ರಿ ಚಂದ್ರು ಹೋರಾಟ ದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos