ಕೆಂಪೇಗೌಡ 
ಜಿಲ್ಲಾ ಸುದ್ದಿ

ಕೆಂಪೇಗೌಡರ ಐಕ್ಯ ಸ್ಥಳ ಯಾವುದು?

ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಬಿಬಿಎಂಪಿ ಮೇ ಯರ್ ಮಂಜುನಾಥರೆಡ್ಡಿ, ಕೆಂಪೇಗೌಡರ...

ಬೆಂಗಳೂರು: ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿ  ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಬಿಬಿಎಂಪಿ ಮೇ ಯರ್ ಮಂಜುನಾಥರೆಡ್ಡಿ, ಕೆಂಪೇಗೌಡರ ನಿಜವಾದ ಐಕ್ಯ ಸ್ಥಳವನ್ನು ಗುರುತಿಸಿ, ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಮಾಗಡಿ ಪುರಭವನದ ಎದುರು ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ಕೆಂಪಾಪುರಕ್ಕೆ ತೆರಳಿ ಐಕ್ಯ ಸ್ಥಳ ಎಂದು ಗುರುತಿಸಿದ ಗೋಪುರಕ್ಕೆ ನಮನ ಸಲ್ಲಿಸಿದರು. ಗೋಪುರ ಪತ್ತೆ ಮಾಡಿ ಸಂರಕ್ಷಿಸಿರುವ ಪ್ರಶಾಂತ್ ಅವರಿಂದ ಮಾಹಿತಿ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಮಂಜುನಾಥರೆಡ್ಡಿ, ``ಕೆಂಪೇಗೌಡರು ಐಕ್ಯರಾದ ಸ್ಥಳವನ್ನು ಹಲವು ವರ್ಷಗಳಿಂದ ಹುಡುಕಲಾಗುತ್ತಿದೆ. ಆಕೆ  ಆದರೆ ಈಗ ಇದೇ ಸ್ಥಳದಲ್ಲಿ ಅವರು ಐಕ್ಯರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ಯಾರ ಸಮಾಧಿ ಎಂದು ಸಂಶೋಧಿಸಬೇಕಿದೆ. ಬೆಂಗಳೂರಿ ನ ನಾಲ್ಕು ಗೋಪುರಗಳ ಮಾದರಿಯಲ್ಲಿ ಈ ಗೋಪುರವೂ ಇದೆ. ಗೋಪುರದಲ್ಲಿ ಹಳಗನ್ನಡದಲ್ಲಿ ಬರೆಯಲಾಗಿದೆ. ಪಾಲಿಕೆಯ ಅಧ್ಯಯನ ಸಮಿತಿ ಮೂಲಕ ಲಿಪಿಗಳನ್ನು ಪರಿಶೀಲಿಸಲಾಗುವುದು.
ಸಮಿತಿ ನೀಡುವ ವರದಿ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವು ದು,'' ಎಂದು ತಿಳಿಸಿದರು. ಪ್ರಾಚ್ಯ ವಸ್ತು ಇಲಾಖೆಗೆ ಮಾಹಿತಿ ನೀಡಿ ಪರಿಶೀಲಿಸಲಾಗುವುದು. ನಂತರ ಗ್ರಾಮದ ಅಭಿವೃದ್ಧಿ ಮಾಡಲಾಗುವುದು. ಪ್ರತಿ ವರ್ಷ ಪಾಲಿಕೆಯಿಂದ ಕೆಂಪೇಗೌಡರದಿನ ಆಚರಿಸುತ್ತಿದ್ದು, ಅವರ ಐಕ್ಯ ಸ್ಥಳ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಆದರೆ ತಜ್ಞರು ಇದನ್ನು ದೃಢಪಡಿಸಬೇಕಿದೆ ಎಂದರು. ಉಪಮೇಯರ್  ಹೇಮಲತಾ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹಾಜರಿದ್ದರು.
ಗ್ರಾ.ಪಂ ನಿರ್ಣಯ: ಕೆಂಪಾಪುರ ಗ್ರಾಮ ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಕೆಂಪೇಗೌಡರ ಐಕ್ಯ ಸ್ಥಳ ಎಂದಿರುವ ಗೋಪುರವನ್ನು ಐತಿಹಾಸಿಕ ಸ್ಥಳ ಎಂದು ಘೋಷಿಸಬೇಕು ಎಂದು ಪಂಚಾಯಿತಿಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿದೆ. ಇಲ್ಲಿ ಪ್ರಾಚೀನ ಲಿಪಿಗಳೂ ಪತ್ತೆಯಾಗಿವೆ. ಹೀಗಾಗಿ ಗ್ರಾಮವನ್ನು ಐತಿಹಾಸಿಕ ತಾಣಎಂದು ಘೋಷಿಸಬೇಕು ಎಂದು ನಿರ್ಣಯಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT