ಜಿಲ್ಲಾ ಸುದ್ದಿ

ಭಾರತೀಯ ವಿದ್ಯಾಭವನದಲ್ಲಿ ಅ.16ರಿಂದ ದಸರಾ ಇಕೆಬಾನ ಪ್ರದರ್ಶನ

Srinivas Rao BV

ಬೆಂಗಳೂರು: ನವರಾತ್ರಿ ಅಂಗವಾಗಿ ಭಾರತೀಯ ವಿದ್ಯಾಭವನದಲ್ಲಿ ಅ.16ರಿಂದ ದಸರಾ ಇಕೆಬಾನ ಪ್ರದರ್ಶನ ಆಯೋಜಿಸಲಾಗಿದೆ.  ವೈವಿಧ್ಯಮಯ ಪುಷ್ಪಾಲಂಕಾರ ವಿನ್ಯಾಸ ಕಲೆ(ಇಕೆಬಾನ) ಜೊತೆಗೇ ದಸರಾ ಬೊಂಬೆಗಳ ಸಂಯೋಜನೆಗಳ ಮೂಲಕ ರಾಮಾಯಣ ಕಥಾನಕವನ್ನು ಅಭಿರೂಪಗೊಳಿಸುವುದು ಕಾರ್ಯಕ್ರಮದ ಉದ್ದೇಶ.

ಭಾರತೀಯ ವಿದ್ಯಾಭವನದಲ್ಲಿ ಇಕೆಬಾನ ಪ್ರದರ್ಶನಕ್ಕಾಗಿ 16 ಮಂದಿ ಕಲಾವಿದರು ವರ್ಣರಂಜಿತ ಕೃತಿಗಳನ್ನು ಅರ್ಪಿಸಲಿದ್ದಾರೆ. ವೈವಿಧ್ಯಮಯ ಪುಷ್ಪಾಲಂಕಾರ ವಿನ್ಯಾಸ ಕಲೆಯಾಗಿರುವ ಇಕೆಬಾನ ಬೌದ್ಧ ಧರ್ಮ ಸೂತ್ರಗಳನ್ನು ಅಭಿವ್ಯಕ್ತಿಸುವ ಮೂಲ ಪರಿಕಲ್ಪನೆಯೊಂದಿಗೆ 14ನೇ ಶತಮಾನದಿಂದ ಬೆಳೆದುಬಂದಿದೆ. 
ಪ್ರೇಯಾ ರಂಗನಾಥ್ ಎಂಬುವವರು 1986ರಲ್ಲಿ ಜಾಪಾನಿನ ಟೋಕಿಯೋದಲ್ಲಿರುವ ಸೊಗೆಟ್ಸು ಸ್ಕೂಲ್ ಆಫ್ ಇಕೆಬಾನದ ಬೆಂಗಳೂರು ಶಾಖೆಯನ್ನು ಪ್ರಾರಂಭಿಸಿದರು. ಬೆಂಗಳೂರು ಕೇಂದ್ರ 30 ವರ್ಷಗಳಿಂದ ಇಕೆಬಾನ ತರಗತಿ, ಪ್ರಾತ್ಯಕ್ಷಿಕೆ, ಕಾರ್ಯಗಾರ ಮತ್ತು ಪ್ರದರ್ಶನಗಳನ್ನು ಏಪಡಿಸುತ್ತಿದ್ದು ಲಾಲ್ ಬಾಗ್ ಪುಷ್ಪಪ್ರದರ್ಶನಗಳಲ್ಲಿ ಸೊಗೆಟ್ಸು ಸಂಸ್ಥೆ ಸುಪ್ರಸಿದ್ಧ. ಇತ್ತೀಚೆಗೆ ಕಬ್ಬನ್ ಪಾರ್ಕ್ ನಲ್ಲೂ ಇಕೆಬಾನ ಪ್ರದರ್ಶನ ನಡೆದಿತ್ತು.  ಅ.16ರಂದು ಕಲಾವಿದೆ ಮಾಳವಿಕ ಅವಿನಾಶ್ ಭಾರತೀಯ ವಿದ್ಯಾಭವನದ ಕೆಜಿಆರ್ ಸಭಾಂಗಣದಲ್ಲಿ ಇಕೆಬಾನ ಪ್ರದರ್ಶನವನ್ನು ಉದ್ಘಾಟಿಸಲಿದ್ದು 19 ರವರೆಗೆ ಪ್ರದರ್ಶನ ನಡೆಯಲಿದೆ.
SCROLL FOR NEXT