ಸಂಗ್ರಹ ಚಿತ್ರ 
ಜಿಲ್ಲಾ ಸುದ್ದಿ

ರು.200ಕ್ಕೆ ಬಟ್ಟೆ ಖರೀದಿಸಿ ಹೊಲಿಸಿ ಕೊಡಬೇಕಂತೆ!

ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ನೀಡಲು ಶಿಕ್ಷಣ ಇಲಾಖೆ ಪ್ರಕ್ರಿಯೆ ಆರಂಭಿಸಿದೆ. 2015-16ನೇ ಸಾಲಿನ 1ರಿಂದ...

ಬೆಂಗಳೂರು: ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ನೀಡಲು ಶಿಕ್ಷಣ ಇಲಾಖೆ ಪ್ರಕ್ರಿಯೆ ಆರಂಭಿಸಿದೆ. 2015-16ನೇ ಸಾಲಿನ 1ರಿಂದ 8 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗದ ಹೆಣ್ಣು ಮಕ್ಕಳು, ಪರಿಶಿಷ್ಟ ಜಾತಿ, ವರ್ಗದ ಬಾಲಕರಿಗೆ 2ನೇ ಜೊತೆ ಸಮವಸ್ತ್ರ ಖರೀದಿಸಲು ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಕಚೇರಿ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. 
ಎರಡನೇ ಜೊತೆ ಉಚಿತ ಸಮವಸ್ತ್ರ ಖರೀದಿಸಲು ಎಸ್‍ಡಿಎಂಸಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ತಲಾ ರು.200 ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಸಿ ಹಾಗೂ ಹೊಲಿಸಲು ಬಳಸಿಕೊಳ್ಳಲಾಗುತ್ತದೆ. 2014-15ನೇ ಸಾಲಿನ ಡೈಸ್ ಮಾಹಿತಿಯ ಅನುಸಾರ ಶಾಲೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. 
ಎಸ್‍ಡಿಎಂಸಿ/ಶಾಲೆಗಳು ಮಕ್ಕಳಿಗೆ ಸಮವಸ್ತ್ರ ಖರೀದಿಸಲು ಬಿಡುಗಡೆ ಮಾಡಿರುವ ಪ್ರತಿ ಮಗುವಿನ ಘಟಕ ವೆಚ್ಚ 200 ಮೊತ್ತದಲ್ಲಿಯೇ ಬಟ್ಟೆ ಖರೀದಿಸಿ, ಸ್ಥಳೀಯ ದರ್ಜಿ ಅಥವಾ ಸ್ತ್ರೀಶಕ್ತಿ ಸಂಘಗಳ ಮೂಲಕ ಹೊಲಿಸಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಇನ್ನು 2014-15ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾದ ಸಮವಸ್ತ್ರ ಬಟ್ಟೆಯು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಮವಸ್ತ್ರ ಬಟ್ಟೆ ಖರೀದಿಸುವಾಗ ಗುಣಮಟ್ಟತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ಎಸ್‍ಡಿಎಂ/ಶಾಲೆಗಳಿಗೆ ಎಚ್ಚರಿಸಲಾಗಿದೆ. 
ಇನ್ನು ನಿಗದಿತ ದಿನದೊಳಗೆ ಅನುದಾನ ಬಳಕೆ ಮಾಡಿಕೊಳ್ಳದೇ ಹೋದಲ್ಲಿ ಶಾಲಾ ಮುಖ್ಯಶಿಕ್ಷಕರೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಜೊತೆಗೆ ಸರ್ವ ಶಿಕ್ಷಣ ಅಭಿಯಾನವು ನಿಗದಿಪಡಿಸಿದ ಗುಣಮಟ್ಟ, ತಾಂತ್ರಿಕ ವೈಶಿಷ್ಟ್ಯತೆಗೆ ಅನುಗುಣವಾಗಿಯೇ ಸಮವಸ್ತ್ರ ವಿತರಿಸಬೇಕೆಂದಿದೆ. ಸಮವಸ್ತ್ರ ಬಟ್ಟೆಯ ಉಳಿಕೆ ಅಥವಾ ಕೊರತೆ ಉಂಟಾದಲ್ಲಿ ಮತ್ತು ಹೆಚ್ಚುವರಿಯಾಗಿ ಖರೀದಿಸಿದ್ದು ಕಂಡುಬಂದಲ್ಲಿ ಶಾಲಾ ಮುಖ್ಯಸ್ಥರು ಮತ್ತು ಎಸ್‍ಡಿಎಂಸಿಯವರೇ ನೇರ ಹೊಣೆಗಾರರಾಗುತ್ತಾರೆ. 
ಅ.29ರಿಂದ ನವೆಂಬರ್ 7ರೊಳಗೆ ಸರಬರಾಜುದಾರರಿಂ ದ ದರಪಟ್ಟಿ ಆಹ್ವಾನಿಸಬೇಕು, ನವೆಂಬರ್ 15ರೊಳಗೆ ಸರಬರಾಜುದಾರರಿಗೆ ಕಾರ್ಯಾದೇಶ ನೀಡಬೇಕು. ನ.16ರಿಂದ ಡಿ.15ರೊಳಗೆ ಸಮವಸ್ತ್ರ ಸಿದ್ಧಪಡಿಸಿ ಸರಬರಾಜು ಮಾಡುವುದು, ಡಿ.16ರಿಂದ 20ರೊಳಗೆ ಸಮವಸ್ತ್ರ ಗುಣಮಟ್ಟ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT