ಮೃತ ಪಿಎಸ್ ಐ ಜಗದೀಶ್ 
ಜಿಲ್ಲಾ ಸುದ್ದಿ

ಪಿಎಸ್ ಐ ಜಗದೀಶ್ ಹತ್ಯೆಗೆ ಆಕ್ರೋಶ: ದೊಡ್ಡಬಳ್ಳಾಪುರ ಬಂದ್

ಪಿಎಸ್ ಐ ಜಗದೀಶ್ ಅವರ ಹತ್ಯೆ ಖಂಡಿಸಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ದೊಡ್ಡಬಳ್ಳಾಪುರ ಬಂದ್ ಗೆ ಕರೆ ನೀಡಿದ್ದಾರೆ...

ಬೆಂಗಳೂರು: ಪಿಎಸ್ ಐ ಜಗದೀಶ್ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಿಎಸ್ ಐ ಹತ್ಯೆಯನ್ನು ಖಂಡಿಸಿ ದೊಡ್ಡಬಳ್ಳಾಪುರ ಬಂದ್ ಗೆ ಕರೆ ನೀಡಿದ್ದಾರೆ.

ಪಿಎಸ್ ಐ ಜಗದೀಶ್ ಅವರು ನಾಲ್ವರು ಪೇದೆಗಳೊಂದಿಗೆ ಬೈಕ್ ಕಳ್ಳರಾದ ಮಧು, ಕೃಷ್ಣರನ್ನು ಚೇಸ್ ಮಾಡಿಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ನೆಲಮಂಗಲದ ಸಮೀಪ ಕಳ್ಳನೊಬ್ಬ ಜಗದೀಶ್ ಅವರ ಎದೆಗೆ ಡ್ರಾಗನ್ ನಿಂದ ಇರಿದು ಸರ್ವಿಸ್ ರಿವಾಲ್ವರ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದ. ಇನ್ನು ಡ್ರಾಗನ್ ಇರಿತದಿಂದ ಗಾಯಗೊಂಡಿದ್ದ ಪೇದೆ ವೆಂಕಟೇಶ್ ಮೂರ್ತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಉತ್ತಮ ಕೆಲಸ ಮಾಡುವ ಮೂಲಕ ಜಗದೀಶ್ ಜನಾನುರಾಗಿಯಾಗಿದ್ದ ಜಗದೀಶ್ ಸಾವಿನಿಂದ ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆದಿದೆ. ಹೀಗಾಗಿ ಸಾರ್ವಜನಿಕರು ರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಗ ಜಗದೀಶ್ ಹತ್ಯೆಯ ಸುದ್ದಿ ಕೇಳಿ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಅವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ನಾಳೆ ಪಿಎಸ್ ಐ ಜಗದೀಶ್ ಅವರ ಅಂತ್ಯಕ್ರಿಯೆ ಮಾಗಡಿ ತಾಲೂಕಿನ ಮಲ್ಲಾಪುರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT