ಜಿಲ್ಲಾ ಸುದ್ದಿ

ಸುಪ್ರಿಂ ಕೋರ್ಟ್ ತೀರ್ಪು ಅಶ್ಚರ್ಯ ತಂದಿದೆ: ಡಿವಿಎಸ್

Shilpa D

ಬೆಂಗಳೂರು: ನ್ಯಾಯಾಂಗ ನೇಮಕಾತಿ ಆಯೋಗ(ಎನ್ ಜೆಎಸಿ) ಕಾಯ್ದೆ ಜಾರಿಗೆ ತರಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ತುಂಬಾ ಅಚ್ಚರಿ ತಂದಿದೆ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ರದ್ದು ಮಾಡಿ ಎಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿರುವ ಸದಾನಂದಗೌಡ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.

ಸುಪ್ರೀಂ ತೀರ್ಪಿನಿಂದ ನಮಗೆ ತುಂಬಾ ಆಶ್ಟರ್ಯವಾಗಿದೆ. ಎನ್ ಜೆಎಸಿ ಕಾಯ್ದೆಯನ್ನು ರದ್ದು ಮಾಡುವ ಮೂಲಕ 2 ದಶಕಗಳ ಹಳೇ ಕೊಲಿಜಿಯಂ ವ್ಯವಸ್ಥೆಯನ್ನೇ ಮುಂದುವರಿಸಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಕಾಯ್ದೆಗೆ ಯಾವುದೇ ವಿರೋಧವಿಲ್ಲದೇ ನೂರಕ್ಕೆ ನೂರಷ್ಟು ಬೆಂಬಲ ಸಿಕ್ಕಿತ್ತು. ಅಲ್ಲದೇ 20 ರಾಜ್ಯಗಳೂ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ಈಗ ಸುಪ್ರೀಂ ತೀರ್ಪು ಆಘಾತ ತಂದಿದೆ ಎಂದು ಸದಾನಂದಗೌಡ ಹೇಳಿದ್ದಾರೆ.

SCROLL FOR NEXT