ಬೆಂಗಳೂರು: ಕನ್ನಡ ಭಾಷೆ ಸಾಕಷ್ಟು ಶ್ರೀಮಂತವಾಗಿದ್ದು ಇನ್ನೂ ಸಾವಿರ ವರ್ಷ ಕಳೆದರೂ ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಪದ್ಮನಾಭನಗರ ಕನ್ನಡ ಸಾಹಿತ್ಯ
ಸಮ್ಮೇಳನಾಧ್ಯಕ್ಷ್ಮ ಶೂದ್ರ ಶ್ರೀನಿವಾಸ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಘಟಕ ಪ್ರಾದೇಶಿಕ ಸಹಕಾರ ತರಬೇತಿ ಕೇಂದ್ರದ ಸಂಸ್ಕೃತಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷ್ಮರ ಭಾಷಣ ಮಾಡಿದರು. ಜಗತ್ತಿನ ಎಲ್ಲ ಗಟ್ಟಿಮುಟ್ಟಾದ ಭಾಷೆಗಳೊಂದಿಗೂ ಸ್ಪರ್ಧೆ ಮಾಡುವಷ್ಟು ಕನ್ನಡ ಸಮರ್ಥವಾಗಿದೆ. ಯಾವುದೇ ಕಾರಣಗಳಿಗೂ ಭಾಷೆಯನ್ನು ದುರ್ಬಲಗೊಳಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ಪ್ರತಿಯೊಬ್ಬ ಕನ್ನಡಿಗ ಕನ್ನಡಕ್ಕಾಗಿ ಕಿಂಚಿತ್ತಾದರೂ ಅಳಿಲು ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
``ಭಾರತ ಸ್ವಾತಂತ್ರ್ಯ ಪಡೆದ ನಂತರ ಬಹಳ ದೂರದೃಷ್ಟಿಯಿಂದ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಮಾಡಲಾಯಿತು. ಇದು ಭಾಷೆಗಳ ಉಳಿವಿಗೆ ಪ್ರಮುಖ ಪಾತ್ರ ವಹಿಸಿತು. ಒಂದು ಭಾಷೆ ಮಾತನಾಡುವ ಜನರನ್ನು ಒಂದು ಕಡೆ ಒಗ್ಗೂಡಿಸಿದ್ದರಿಂದ ಆ ಭಾಷೆ ಮತ್ತಷ್ಟು ಸಮೃದಿಟಛಿಯಾಗಿ ಬೆಳೆಯಲು ಸಹಕಾರಿಯಾಯಿತು. ಪ್ರಾದೇಶಿಕ ಭಾಷೆಗಳ ಮಧ್ಯೆಯೂ ಇಂಗ್ಲಿಷ್ ಭಾಷಾ ಶಾಲೆಗಳು ಹೆಚ್ಚಾಗಿ ಬೆಳೆದಿವೆ.
ಹಾಗೆ ನೋಡಿದರೆ ಕೋಲ್ಕತಾ ಮತ್ತು ಚೆನ್ನೈನಲ್ಲಿ ಇಲ್ಲಿಗಿಂತಲೂ ಹೆಚ್ಚಿನ ಆಂಗ್ಲಮಾಧ್ಯಮ ಶಾಲೆಗಳಿವೆ. ಆದರೂ ಕೋಲ್ಕತಾದಲ್ಲಿ ಬಂಗಾಳಿ ಮತ್ತು ಚೆನ್ನೈನಲ್ಲಿ ತಮಿಳು ಕಲಿಯದೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂಬ ವಾತಾವರಣ ಇದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಕನ್ನಡ ಕಲಿಯದೆ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಿಸಲು ನಮಗಿನ್ನೂ ಸಾಧ್ಯವಾಗಿಲ್ಲ' ಎಂದು ವಿಷಾದಿಸಿದರು.
ಗಾಯಕ ಶಿವಮೊಗ್ಗ ಸುಬ್ಬಣ್ಣ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ್ಮ ಟಿ.ತಿಮ್ಮೇಶ್, ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷ್ಮಣಾಧಿಕಾರಿ ಕೆ.ಪ್ರಕಾಶ್, ಗಾಯತ್ರಿ ಪ್ರಕಾಶ್ ಅವರಿಗೆ ಶತಮಾನೋತ್ಸವದ ಗೌರವ ನೀಡಿ ಸನ್ಮಾನಿಸಲಾಯಿತು.