ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಕಚೇರಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ನಿವೇಶನದ ನಿರೀಕ್ಷೆಯಲ್ಲಿದ್ದ ನಾಗರಿಕರಿಗೆ ಬಿಡಿಎ ನಿರಾಸೆ

ಬಹುನಿರೀಕ್ಷಿತ ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನಗಳ ಹಂಚಿಕೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಹೊರಡಿಸಬೇಕಿದ್ದ ಅಧಿಸೂಚನೆಯನ್ನು ನ.1 ರ ರಾಜ್ಯೋತ್ಸವ ದಿನಕ್ಕೆ...

ಬೆಂಗಳೂರು: ಬಹುನಿರೀಕ್ಷಿತ ಕೆಂಪೇಗೌಡ ಬಡಾವಣೆಯ 5 ಸಾವಿರ ನಿವೇಶನಗಳ ಹಂಚಿಕೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಹೊರಡಿಸಬೇಕಿದ್ದ ಅಧಿಸೂಚನೆಯನ್ನು ನ.1 ರ ರಾಜ್ಯೋತ್ಸವ ದಿನಕ್ಕೆ ಮುಂದೂಡಲಾಗಿದೆ.

ಇದಕ್ಕೂ ಮುನ್ನ ಅ.19 ರಂದು ಅಧಿಸೂಚನೆ ಹೊರಡಿಸಲು ತಯಾರಿ ನಡೆದಿತ್ತು. ಆದರೆ ರಾಜ್ಯೋತ್ಸವದ ವಿಶೇಷ ದಿನದಂದು ನಗರದ ಜನತೆಗೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಅಧಿಸೂಚನೆ ದಿನಾಂಕವನ್ನು ಎರಡು ವಾರಗಳ ಮಟ್ಟಿಗೆ ಮುಂದೂಡಲಾಗಿದೆ. ಇದರಿಂದಾಗಿ ಅರ್ಜಿ ಸಲ್ಲಿಸಲು ತುದಿಗಾಲಲ್ಲಿದ್ದವರು ನಿರಾಸೆಗೊಳಗಾಗಿದ್ದಾರೆ. ಅರ್ಜಿ ಸಲ್ಲಿಸಲು ಮತ್ತಷ್ಟು ದಿನಗಳ ಕಾಲ ಕಾಯಬೇಕಿದೆ. ಸರಣಿ ರಜಾದಿನಗಳು ಇರುವುದರಿಂದ ಅಧಿಸೂಚನೆ ಹೊರಡಿಸಿದರೆ ಮುಂದಿನ ಪ್ರಕ್ರಿಯೆಗಳಿಗೆ ಅಡಚಣೆಯಾಗಬಹುದು ಎಂಬ ಚರ್ಚೆಯೂ ನಡೆದಿದೆ.

ಉಂಟು ಮೀಸಲಾತಿ ಫಲ : 20/30 ನಿವೇಶನದ ರು.5 ಲಕ್ಷ ದರ ದಿಂದ ಆರಂಭವಾಗಿ 50/80 ವಿಸ್ತೀರ್ಣದ ರು.96 ಲಕ್ಷದ ನಿವೇಶನದವರೆಗೆ ದರವಿದೆ. ಸದ್ಯಕ್ಕೆ 5 ಸಾವಿರ ನಿವೇಶನ
ಹಂಚಲಾಗುತ್ತಿದೆ. ನಿವೇಶನ ಹಂಚಿಕೆಯ ಜೊತೆಗೆ ವಿವಿಧ ವರ್ಗಗಗಳಿಗೆ ಮೀಸಲಿನ ಲಾಭವೂ ದೊರೆತಿದೆ. ಇದರಲ್ಲಿ ಹಿಂದುಳಿದ ವರ್ಗ ಕ್ಕೆ ಪ್ರತ್ಯೇಕವಾದ ಶೇ.10 ರಷ್ಟು ಮೀಸಲು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದ `2ಎ' ಹಾಗೂ ` 2ಬಿ' ವರ್ಗಕ್ಕೆ ಒಟ್ಟು ಶೇ.10 ಪ್ರತ್ಯೇಕ ಮೀಸಲು ನೀಡಲಾಗಿದೆ.

ಕಳೆದ ಬಾರಿ ನಿವೇಶನಕ್ಕೆ ಅರ್ಜಿ ಕರೆದಿದ್ದಾಗ ಹಿಂದುಳಿದ ವರ್ಗಕ್ಕೆ ಮೀಸಲು ನೀಡರಲಿಲ್ಲ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿ ದ ವರ್ಗಕ್ಕೆ ಮೀಸಲು ಕಲ್ಪಿಸಿದ್ದಾರೆ. ಪ.ಪಂಗಡಕ್ಕೆ ಶೇ.3, ಪ.ಜಾತಿಗೆ ಶೇ.15, ಪ್ರವರ್ಗ1ಕ್ಕೆ ಶೇ.2, ಮಾಜಿ ಸೈನಿಕರಿಗೆ ಶೇ.5, ರಾಜ್ಯ ಸರ್ಕಾರಿ ನೌಕರರಿಗೆ ಶೇ.10, ಕೇಂದ್ರ ಸರ್ಕಾರಿ ನೌಕರರಿಗೆ ಶೇ.2, ವಿಕಲಚೇತನರಿಗೆ ಶೇ.2, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಶೇ.2 ರಷ್ಟು ಮೀಸಲು ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್