ಬೀದರ್: ಸಂಶೋಧಕ ಕಲ್ಬುರ್ಗಿ ಹತ್ಯೆಯನ್ನು ಖಂಡಿಸಿ ಬೀದರ್ ಜಿಲ್ಲೆಯ ಉರ್ದು ಸಾಹಿತಿಗಳಾದ ಮಹಮದ್ ಅಮಿರೊದ್ದೀನ್ ಅಮೀರ್ ಹಾಗೂ ಮೊಹಮ್ಮದ್ ಯೂಸುಫ್ ರಹೀಮ್ ಬಿದ್ರಿ ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ನಗದು ಬಹುಮಾನವನ್ನು ಮರಳಿಸಿದ್ದಾರೆ.
ಫೋರಂ ಫಾರ್ ಡೆಮಾಕ್ರಸಿ ಆಂಡ್ ಕಮ್ಯುನಲ್ ಅಮೇಟಿ(ಎಫ್.ಡಿ.ಸಿ.ಎ) ಜಿಲ್ಲಾ ಸಂಚಾಲಕ ಮೌಲ್ವಿ ಮಹಮ್ಮದ್ ಫಯಿ ಮೋದ್ದೀನ್ ನೇತೃತ್ವದಲ್ಲಿ ಸಾಹಿತಿಗಳು ಪ್ರಶಸ್ತಿ ಹಾಗೂ ನಗದು ಬಹುಮಾನಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಹಮ್ಮದ್ ಮಜೀದ್ ಅವರಿಗೆ ಮರಳಿಸಿದರು.
ಫಲಕ, ಚೆಕ್, ಪ್ರಮಾಣಪತ್ರ ಹಿಂದಕ್ಕೆ: ಮಹಮ್ಮದ್ ಆಮಿರೊದ್ದೀನ್ ಅಮೀರ್ ಅವರು 2010 ರಲ್ಲಿ ಸರಾ ಶಾಯರಿ ಪುಸ್ತಕ ಮತ್ತು ಮಹಮ್ಮದ್ ಯೂಸೂಫ್ ರಹೀಮ್ ಬಿದ್ರಿ ಅವರು 2013 ರಲ್ಲಿ ಸಕಾಲ ಕಥಾ ಸಂಕಲನಕ್ಕೆ ಪಡೆದ ಪ್ರಶಸ್ತಿ ಫಲಕ, ಪ್ರಮಾಣಪತ್ರ ತಲಾ ನಗದು 5 ಸಾವಿರ ರೂ ಮೌಲ್ಯದ ಚೆಕ್ ನ್ನು ವಾಪಸ್ ಮಾಡಿದ್ದಾರೆ.