(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಎಟಿಎಂ ಹಣ ಕದ್ದವನ ಕೃತ್ಯ ಸೆರೆ

ಎಟಿಎಂ ಘಟಕಕ್ಕೆ ತುಂಬಲು ತೆಗೆದುಕೊಂಡು ಹೋಗಿದ್ದ ಹಣದಲ್ಲಿ ರು.50 ಲಕ್ಷ ದೋಚಿ ಪರಾರಿಯಾಗಿರುವ ಆರೋಪಿ ಮಹೇಶ್ (21) ಕೃತ್ಯ ಬ್ಯಾಂಕ್‍ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ...

ಬೆಂಗಳೂರು: ಎಟಿಎಂ ಘಟಕಕ್ಕೆ ತುಂಬಲು ತೆಗೆದುಕೊಂಡು ಹೋಗಿದ್ದ ಹಣದಲ್ಲಿ ರು.50 ಲಕ್ಷ ದೋಚಿ ಪರಾರಿಯಾಗಿರುವ ಆರೋಪಿ ಮಹೇಶ್ (21) ಕೃತ್ಯ ಬ್ಯಾಂಕ್‍ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಡಿಯೋ ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಫೋಟೋ ರೂಪದಲ್ಲಿ ಸಿದಟಛಿಪಡಿಸಿ ವಿವಿಧ ಠಾಣೆಗಳಿಗೆ ರವಾನಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲೂ ಅಂಟಿಸಿದ್ದಾರೆ. ಕೃತ್ಯ ಎಸಗುವ ಮೂರು ದಿನಗಳ ಹಿಂದಷ್ಟೇ ಬ್ರಿಂಕ್ಸ್ ಆರ್ಯ ಕಂಪನಿಗೆ ತನ್ನ ಸ್ವವಿವರಗಳ ಸುಳ್ಳು ದಾಖಲೆ ಮಾತ್ರವಲ್ಲದೇ ಸುಳ್ಳು ಮೊಬೈಲ್ ಫೋನ್ ಸಂಖ್ಯೆಯನ್ನು ನೀಡಿದ್ದ. ಹೀಗಾಗಿ, ಆರೋಪಿ ಬಂಧನ ಸವಾಲಾಗಿದೆ.

ಅಂತಿಮವಾಗಿ ಆತನ ಫೋಟೋಗಳನ್ನು ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮುದ್ರಿಸುವುದರಿಂದ ಆರೋಪಿ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು ಎನ್ನುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಬುಧವಾರ (ಅ. 21) ಬೆಳಗ್ಗೆ 11.30ಕ್ಕೆ ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ ಬಳಿ ಇರುವ ಎಟಿಎಂಗೆ ಬ್ರಿಂಕ್ಸ್ ಆರ್ಯ ಕಂಪನಿಯ ಮೇಲ್ವಿಚಾರಕ ಮಂಜುನಾಥ್, ಮಹೇಶ್, ಕಾರು ಚಾಲಕ ಪ್ರಭು ಮತ್ತು ಸೆಕ್ಯುರಿಟಿ ಗಾರ್ಡ್ ಮುತ್ತಣ್ಣ ಟಾಟಾ ಸುಮೋದಲ್ಲಿ ರು.1 ಕೋಟಿ ತಂದಿದ್ದರು. ಈ ವೇಳೆ ಮೂವರನ್ನು ಯಾಮಾರಿಸಿದ್ದ ಆರೋಪಿ ಮಹೇಶ್ ರು.50 ಲಕ್ಷ ದೋಚಿ ಪರಾರಿಯಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT