ನ್ಯಾಯಮೂರ್ತಿ ಸಂತೋಷ್ ಹೆಗಡೆ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸಾಧಕರಿಗೆ ದಸರಾ ಸನ್ಮಾನ

ನಗರದ ಎಚ್‍ಎಸ್‍ಆರ್ ಲೇಔಟ್‍ನ `ಜೈ ಮಾತಾ ದೀ' ಸಂಘದ ವತಿಯಿಂದ 8ನೇ ವರ್ಷದ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು...

ಬೆಂಗಳೂರು: ನಗರದ ಎಚ್‍ಎಸ್‍ಆರ್ ಲೇಔಟ್‍ನ `ಜೈ ಮಾತಾ ದೀ' ಸಂಘದ ವತಿಯಿಂದ 8ನೇ ವರ್ಷದ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶನಿವಾರ ನಡೆದ ಕಾರ್ಯಕ್ರಮದಲ್ಲಿ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಯಕ್ಷಗಾನ, ಸಂಗೀತ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ತುಮಕೂರಿನ ಅಟವಿ ಮಠದ ಶಿವಲಿಂಗ ಮಹಾ ಸ್ವಾಮೀಜಿ ಅವರಿಗೆ `ಶಾಂತಿ ಮತ್ತು ಸಹಬಾಳ್ವೇ ಪ್ರಶಸ್ತಿ, ಗೋಸಾಯಿ ಮಠದ ಸ್ವಾಮಿ ಬುದ್ಧಿ ಯೋಗಾನಂದ ಸ್ವಾಮೀಜಿ ಗೆ `ಜೀವಮಾನ ಸಾಧನೆ ಪ್ರಶಸ್ತಿ', ಎಚ್. ಆರ್.ಸೋಮಶೇಖರ ರೆಡ್ಡಿ ಹಾಗೂ ಎಚ್. ಆರ್.ಶಾಮಲಾ ಅವರಿಗೆ `ಎಚ್‍ಎಸ್‍ಆರ್ ಲೇಔಟ್‍ನ ಆದರ್ಶ ದಂಪತಿ 2015-ದಸರಾ ಪ್ರಶಸ್ತಿ', ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರಿಗೆ `ಭೈರವ ರತ್ನ ಪ್ರಶಸ್ತಿ', ಸಮಾಜ ಸೇವಕ ಡಾ.ನಾಗೇಂದ್ರ ಪ್ರಸಾದ್ ಅವರಿಗೆ `ದಸರ ಶ್ರೀ ಪ್ರಶಸ್ತಿ' ಹಾಗೂ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯ ಪೇದೆ ರಘು ಬೆಟ್ಟಳ್ಳಿ ಅವರಿಗೆ `ಉದಯೋನ್ಮುಖ ಪ್ರತಿಭೆ ಪ್ರಶಸ್ತಿ', ಪಂಚಮಿ ಎಂಬ ಯುವತಿಗೆ `ದಸರಾ ಸುಂದರಶ್ರೀ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಗಣ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಕಾರ್ಯಕ್ರಮ ದಲ್ಲಿ ಎಚ್‍ಎಸ್‍ಆರ್ ಲೇಔಟ್‍ನ ನೂರಾರು ನಾಗರಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT