ಜಿಲ್ಲಾ ಸುದ್ದಿ

ಸ್ವಚ್ಚತೆ ಮೂಲಕ ಮಾಜಿ ಸಿಎಂ ಬಂಗಾರಪ್ಪ ಅವರ ಜನ್ಮದಿನ ಆಚರಣೆಗೆ ಸಿದ್ದತೆ

Shilpa D

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ 83ನೇ ಹುಟ್ಟುಹಬ್ಬದ ಅಂಗವಾಗಿ ಈ ತಿಂಗಳ  28ರಂದು ನಗರದಲ್ಲಿ ನಮನ, ಚಿಂತನ ಮತ್ತು ಅಭಿನಂದನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಎಸ್‌.ಬಂಗಾರಪ್ಪ ವಿಚಾರ ವೇದಿಕೆ ಮತ್ತು ಎಸ್‌.ಬಂಗಾರಪ್ಪ ಫೌಂಡೇಶನ್‌ ವತಿಯಿಂದ ಈ ಕಾರ್ಯಕ್ರಮ ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ನಡೆಯಲಿದೆ’ ಎಂದು ವೇದಿಕೆಯ ವ್ಯವಸ್ಥಾಪಕ ಟ್ರಸ್ಟಿ, ಶಾಸಕ ಮಧು ಬಂಗಾರಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತ ಮತ್ತು ಪ್ರಸ್ತುತ ಕೃಷಿ ಸಂದರ್ಭ ಮತ್ತು ಕಪ್ಪು ಕನ್ನಡಕದ ಹಿಂದಿನ ಕರ್ನಾಟಕದ ಕನಸು ಕುರಿತು ಎರಡು  ವಿಚಾರ ಗೋಷ್ಠಿಗಳು ನಡೆಯಲಿವೆ. ಸಂಜೆ 4.30ಕ್ಕೆ ಜಾನಪದ ಝೇಂಕಾರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ವೇದಿಕೆಯ ಗೌರವ ವ್ಯವಸ್ಥಾಪಕ ಟ್ರಸ್ಟಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ‘ಬಂಗಾರಪ್ಪ ಅವರ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಕೆರೆ ಹೂಳೆತ್ತುವ ಕಾರ್ಯಕ್ರಮ:
ಸೊರಬ ತಾಲ್ಲೂಕಿನ ಮಾವಲಿಯ ದೊಡ್ಡಕೆರೆಯ ಹೂಳೆತ್ತಲಾಗುವುದು. ಈ ಕಾರ್ಯಕ್ರಮದಲ್ಲಿ ನಾನು ಶ್ರಮದಾನ ಮಾಡುವೆ’ ಎಂದು ಮಧು ಬಂಗಾರಪ್ಪ ಹೇಳಿದರು. ‘1,400 ಕೆರೆಗಳಿರುವ ಸೊರಬದಲ್ಲಿ ಕೆರೆ ಉಳಿಸುವುದು ನಮ್ಮ ಕರ್ತವ್ಯ. ಹೀಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1500ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಬಂಗಾರ ಪ್ರಶಸ್ತಿ

ಅ. 28 ಸಂಜೆ 5.45ಕ್ಕೆ ನಡೆಯಲಿರುವ  ಅಭಿನಂದನಾ ಕಾರ್ಯಕ್ರಮದಲ್ಲಿ ಬೀದರ್‌ನ ಭಾಲ್ಕಿಯ ಬಸವಲಿಂಗ ಪಟ್ಟ ದೇವರು ಅವರಿಗೆ ಸೇವಾ ಬಂಗಾರ, ಪ್ಯಾರಾಲಿಂಪಿಕ್ ಕ್ರೀಡಾಪಟು ಎಚ್.ಎನ್‌. ಗಿರೀಶ್‌ ಅವರಿಗೆ ಕ್ರೀಡಾ ಬಂಗಾರ, ಹಿರಿಯ ರಂಗನಟಿ ಸುಭದ್ರಮ್ಮ ಮನ್ಸೂರ್‌ ಅವರಿಗೆ ಕಲಾ ಬಂಗಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.

SCROLL FOR NEXT