ಜಿಲ್ಲಾ ಸುದ್ದಿ

ಸಾಹಿತಿ ಆರೂರು ಲಕ್ಷ್ಮಣ ಶೇಟ್‌ ನಿಧನ

Shilpa D

ಹುಬ್ಬಳ್ಳಿ : ಹಿರಿಯ ಸಾಹಿತಿ, ಅಂಕಣಕಾರ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಆರೂರು ಲಕ್ಷ್ಮಣ ಶೇಟ್‌ (66) ಶನಿವಾರ ನಿಧನರಾಗಿದ್ದಾರೆ.

ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವಿದೆ. ಮೂಲತಃ ಉಡುಪಿ ಜಿಲ್ಲೆಯ ಆರೂರು ಮೂಲದ ಲಕ್ಷ್ಮಣ ಶೇಟ್‌ ಕಳೆದ ಮೂರು ದಶಕಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.

ಕತೆಗಾರ, ಕಾದಂಬರಿಕಾರ, ಕವಿಯಾಗಿ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದ ಅವರು ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಕತೆಗಳನ್ನು ಬರೆಯುತ್ತಿದ್ದ ಅವರು, ಸುಮಾರು 400 ಕತೆಗಳನ್ನು ಬರೆದಿದ್ದಾರೆ. ಅವರ ಎರಡು ಕಥಾ ಸಂಕಲನಗಳಲ್ಲಿ "ವೇಷಗಳು' ಪ್ರಮುಖವಾದುದು.

ಬಿಎಯಲ್ಲಿ ರ್‍ಯಾಂಕ್‌ ಪಡೆದ ಲಕ್ಷ್ಮಣ ಶೇಟ್‌, ಅದೇ ದಿನ ಶಿಕ್ಷಕರಾಗಿದ್ದ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಸಾಹಿತ್ಯಿಕ ವಲಯದಲ್ಲಿ ಸದಾ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.

SCROLL FOR NEXT